×
Ad

ಸಂಸದ ಪ್ರತಾಪ ಸಿಂಹನ ಬೆತ್ತಲೆ ಜಗತ್ತಿನ ಮಾಹಿತಿ ನನ್ನ ಬಳಿಯೂ ಇದೆ: ಎಚ್. ವಿಶ್ವನಾಥ್ ವಾಗ್ದಾಳಿ

Update: 2023-04-29 20:52 IST

ಮೈಸೂರು: ಪತ್ರಕರ್ತರಿಗೆ ಧಮ್ಕಿ‌ ಹಾಕುವ  ಸಂಸದ ಪ್ರತಾಪ ಸಿಂಹನ ಬೆತ್ತಲೆ ಜಗತ್ತಿನ ಮಾಹಿತಿ ನನ್ನ ಬಳಿಯೂ ಇದ್ದು ಸಾರ್ವಜನಿಕವಾಗಿ ಬೆತ್ತಲೆಗೊಳಿಸುತ್ತೇನೆ ಎಂದು ವಿಧಾನ‌ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ವಾಗ್ದಾಳಿ ನಡೆಸಸಿದರು.

ನಗರದ ಜಿಲ್ಲಾ ಪತ್ರಕರ್ತ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪತ್ರಕರ್ತರಿಗೆ ಧಮ್ಕಿ ಹಾಕುವ ಪ್ರತಾಪ ಸಿಂಹ ನಡೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ತನ್ನ ಪತ್ನಿಯನ್ನೇ  ತಂಗಿ ಎಂದು ಸುಳ್ಳು ಮಾಹಿತಿ ನೀಡಿ ಸೈಟ್ ಪಡೆದಿರುವ ನಿನಗೆ ಪತ್ರಕರ್ತರ ಬಗ್ಗೆ ಮಾತನಾಡುವ  ಯಾವ ನೈತಿಕತೆ ಇದೆ ಎಂದು‌ ಪ್ರಶ್ನಿಸಿದರು.

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತ ಯಾವುದೇ ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ನಮ್ಮಂತವರ ಸಹಾಯದಿ‌ಂದ ಮಾತ್ರ ಈ ಬಾರಿ ಅಧಿಕಾರಕ್ಕೆ ಬಂದಿದೆ. ರಾಜರ ಕಾಲದಿಂದಲೂ ರಾಜ್ಯದಲ್ಲಿ ಸಾಮಾಜಿಕ ನ್ಯಾಯ ಸಿಕ್ಕಿದೆ. ಆಗಾಗಿ ಬಿಜೆಪಿ ತನ್ನ ತತ್ವ ಸಿದ್ದಾಂತದ ಮೇಲೆ ಅಧಿಕಾರಕ್ಕೆ ಬರಲ್ಲ. ರಾಜ್ಯಕ್ಕೆ ನೀಡಬೇಕಾದ ತೆರಿಗೆ ಪಾಲನ್ನು  ಕೊಡದೆ ಪದೆ ಪದೆ ಕರ್ನಾಟಕ್ಕೆ ಬರುವ ಪ್ರಧಾನಿ‌ ಮೋದಿ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದರು.

ನಮ್ಮ ಮೇಲೆ ಹಿಂದಿ ಭಾಷೆ ಹೇರುವುದನ್ನು ನಿಲ್ಲಿಸಿ. ನಂದಿನಿ ಹಾಗೂ ಬ್ಯಾಂಕುಗಳನ್ನು ಖಾಸಗೀಕರಣ ಮಾಡಿ  ಕಿತ್ತುಕೊಳ್ಳಲಾಗುತ್ತಿದೆ ಇದನ್ನು ತಡೆಯುವ ಕೆಲಸವನ್ನು ಪ್ರಧಾನಿ ಅವರು ಮಾಡಬೇಕು ಎಂದು ಆಗ್ರಹಿಸಿದರು.

ಚುನಾವಣೆ ಸಮಯದಲ್ಲಿ ಅನವಶ್ಯಕವಾಗಿ ಸಂಘರ್ಷ ಮಾಡಲಾಗುತ್ತಿದೆ. ಸಿದ್ದರಾಮಯ್ಯ ಮತ್ತು ಸೋಮಣ್ಣ ಇಬ್ಬರು ನಾಯಕರು ತಳಮಟ್ಟದಿಂದ ರಾಜಕೀಯಕ್ಕೆ ಬಂದಿದ್ದಾರೆ. ಇಬ್ಬರೂ ಗೆಲುವಿಗಾಗಿ ತಮ್ಮ ಹೋರಾಟ ನಡೆಸುತಿದ್ದಾರೆ. ಈ ಮಧ್ಯ ಪ್ರತಾಪ ಸಿಂಹನಿಗೆ ಏನು ಕೆಲಸ  ಎಂದು ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Similar News