×
Ad

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 171 ರೂ. ಕಡಿತ

Update: 2023-05-01 10:56 IST

ಹೊಸದಿಲ್ಲಿ: 19 ಕೆಜಿ ವಾಣಿಜ್ಯ ಬಳಕೆಯ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (ಎಲ್‌ಪಿಜಿ) ಸಿಲಿಂಡರ್‌ಗಳ ಬೆಲೆಯನ್ನು ರೂ 171.50 ರಷ್ಟು ಕಡಿತಗೊಳಿಸಲಾಗಿದ್ದು, ಮೇ 1 ರಿಂದ ಜಾರಿಗೆ ಬರಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪರಿಷ್ಕರಣೆ ನಂತರ, ಇಂದಿನಿಂದ ದಿಲ್ಲಿಯಲ್ಲಿ 1,856.50 ರೂ ವೆಚ್ಚದಲ್ಲಿ 19 ಕೆಜಿ ಎಲ್ಪಿಜಿ ಸಿಲಿಂಡರ್ ಲಭ್ಯವಿರುತ್ತದೆ.

ಮುಂಬೈನಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1,808.50 ರೂ.ಗಳಾಗಿದ್ದು, ಕೋಲ್ಕತ್ತಾದಲ್ಲಿ ಬೆಲೆ 1,960.50 ರೂ.ಗೆ ಇಳಿದಿದೆ.

ಇಂದಿನಿಂದ ಜಾರಿಗೆ ಬರುವಂತೆ ಚೆನ್ನೈನಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್ 2,021.50 ರೂ.ಗೆ ಮಾರಾಟವಾಗುತ್ತಿದೆ.

ಪರಿಷ್ಕರಣೆಯ ಮೊದಲು, ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಪ್ರಕಾರ ದಿಲ್ಲಿಯಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಕ್ರಮವಾಗಿ 2,028, ಕೋಲ್ಕತ್ತಾದಲ್ಲಿ 2,132, ಮುಂಬೈನಲ್ಲಿ 1,980 ಹಾಗೂ  ಚೆನ್ನೈನಲ್ಲಿ 2,192.50 ರೂ. ಇತ್ತು.

ಸತತ 2ನೇ ತಿಂಗಳಲ್ಲಿ  ದರ ಇಳಿಕೆಯಾಗಿದೆ. ಎಪ್ರಿಲ್ 1 ರಂದು 19 ಕೆಜಿ ಸಿಲಿಂಡರ್‌ಗೆ 91.5 ರೂ. ಇಳಿಕೆ ಮಾಡಲಾಗಿತ್ತು.

Similar News