6 ತಿಂಗಳ ಕಾಯುವಿಕೆ ಅವಧಿ ಇಲ್ಲದೆ ವಿಚ್ಛೇದನೆಗೆ ಕೆಲವೊಂದು ಷರತ್ತುಗಳಿಗೆ ಒಳಪಟ್ಟು ಅನುಮತಿಸಬಹುದು: ಸುಪ್ರಿಂ ಕೋರ್ಟ್‌

Update: 2023-05-01 06:01 GMT

ಹೊಸದಿಲ್ಲಿ: “ಮತ್ತೆ ಸರಿಪಡಿಸಲಾಗದ ಮುರಿದು ಬಿದ್ದ ಮದುವೆ” ಎಂಬ ಆಧಾರದಲ್ಲಿ ವಿವಾಹಗಳನ್ನು ವಿಧಿ 142 ಅಡಿಯಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಬಳಸಿಕೊಂಡು ತಾನು ಅನೂರ್ಜಿತಗೊಳಿಸಬಹುದಾಗಿದೆ ಎಂದು ಸುಪ್ರೀಂ ಕೋರ್ಟ್‌ ಇಂದು ಹೇಳಿದೆ. ಅಷ್ಟೇ ಅಲ್ಲದೆ ಪರಸ್ಪರ ಸಹಮತದ ವಿಚ್ಛೇದನ ನೀಡಲು ಕಡ್ಡಾಯ ಆರು ತಿಂಗಳ ಕಾಯುವಿಕೆ ಅವಧಿಯನ್ನೂ ಕೆಲವೊಂದು ಷರತ್ತುಗಳಿಗೆ ಒಳಪಟ್ಟು ತೆಗೆದುಹಾಕಬಹುದಾಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

“ಸರಿಪಡಿಸಲಾಗದ ಮುರಿದುಬಿದ್ದ ಮದುವೆ ಎಂಬುದು ಯಾವಾಗ ಪರಿಗಣಿಸಬಹುದು ಎಂಬುದಕ್ಕೆ ಅಂಶಗಳನ್ನು ನಾವು ಮುಂದಿಟ್ಟಿದ್ದೇವೆ,” ಎಂದು ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌, ಸಂಜೀವ್‌ ಖನ್ನಾ, ಎ ಎಸ್‌ ಒಕಾ, ವಿಕ್ರಮ್‌ ನಾಥ್‌ ಮತ್ತು ಜೆ ಕೆ ಮಹೇಶ್ವರಿ ಅವರ ಸಂವಿಧಾನಿಕ ಪೀಠ ಹೇಳಿದೆ.

ಜೀವನಾಂಶ ನೀಡಿಕೆ, ಮಕ್ಕಳ ಹಕ್ಕುಗಳು ಮುಂತಾದ ವಿಚಾರಗಳಲ್ಲಿ ಹೇಗೆ ಸಮತೋಲನ ಸಾಧಿಸಬಹುದೆಂಬುದನ್ನೂ  ಸುಪ್ರೀಂ ಕೋರ್ಟ್‌ ವಿವರಿಸಿದೆ.

ಹಿಂದು ವಿವಾಹ ಕಾಯಿದೆಯ ಸೆಕ್ಷನ್‌ 13ಬಿ ಅಡಿಯಲ್ಲಿ ಉಲ್ಲೇಖಿಸಲಾದ ಪರಸ್ಪರ ಸಮಹತದ ವಿಚ್ಛೇದನಕ್ಕೆ ಕಡ್ಡಾಯ ಆರು ತಿಂಗಳು ಕಾಯುವಿಕೆ ಅವಧಿಯನ್ನು ತೆಗೆದುಹಾಕಬಹುದೇ ಎಂಬ ವಿಚಾರವು ಸಂವಿಧಾನಿಕ ಪೀಠದ ಮುಂದಿತ್ತು. ಆದರೆ ವಿಚಾರಣೆ ವೇಳೆಗೆ ಮತ್ತೆ ಸರಿಪಡಿಸಲಾಗದ ಮುರಿದು ಬಿದ್ದ ಮದುವೆ ಆಧಾರದಲ್ಲಿ ಈ ವಿಚಾರ ಪರಿಗಣಿಸಬಹುದೇ ಎಂಬ ವಿಚಾರವನ್ನೂ ಪೀಠ ಅವಲೋಕಿಸಿದೆ.

Similar News