ಐಪಿಎಲ್‌ ನೀತಿ ಸಂಹಿತೆ ಉಲ್ಲಂಘನೆ: ಕೊಹ್ಲಿ, ಗಂಭೀರ್‌ಗೆ ದಂಡ ವಿಧಿಸಿದ ಬಿಸಿಸಿಐ

Update: 2023-05-02 05:43 GMT

 ಹೊಸದಿಲ್ಲಿ: ಲಕ್ನೋ ಸೂಪರ್‌ ಜೈಂಟ್ಸ್‌ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳ ನಡುವೆ ಸೋಮವಾರ ಲಕ್ನೋದಲ್ಲಿ ನಡೆದ ಐಪಿಎಲ್‌ ಪಂದ್ಯದ ನಂತರ ತೀವ್ರ ಮಾತಿನ ಚಕಮಕಿ ನಡೆಸಿದ ರಾಯಲ್‌ ಚಾಲೆಂಜರ್ಸ್‌  ತಂಡದ ವಿರಾಟ್‌ ಕೊಹ್ಲಿ ಹಾಗೂ ಲಕ್ನೋ ತಂಡದ ಮೆಂಟರ್‌ ಗೌತಮ್‌ ಗಂಭೀರ್‌ ಅವರಿಬ್ಬರಿಗೂ ಐಪಿಎಲ್‌ 2023 ನೀತಿ ಸಂಹಿತೆ ಉಲ್ಲಂಘನೆಗಾಗಿ ಬಿಸಿಸಿಐ ಭಾರೀ ಮೊತ್ತದ ದಂಡ ವಿಧಿಸಿದೆ.

ಈ ಕಡಿಮೆ ಸ್ಕೋರ್‌ ಪಂದ್ಯದಲ್ಲಿ ಆರ್‌ಸಿಬಿ ಗೆದ್ದ ನಂತರ ಕೊಹ್ಲಿ ಮತ್ತು ಗಂಭೀರ್‌ ನಡುವೆ ನಡೆದ ಮಾತಿನ ಚಕಮಕಿ  ಇತರ ಅನೇಕರ ಶಾಮೀಲಾತಿಗೂ ಕಾರಣವಾಯಿತು.

ಗೌತಮ್‌ ಗಂಭೀರ್‌  ಹಾಗೂ ವಿರಾಟ್‌ ಕೊಹ್ಲಿ ಅವರಿಗೆ ಅವರ ಪಂದ್ಯ ಶುಲ್ಕದ ಶೇ100 ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಲಾಗಿದೆ.

ಕೊಹ್ಲಿ ಮತ್ತು ಗಂಭೀರ್‌ ಇಬ್ಬರೂ ತಾವು ಐಪಿಎಲ್‌ ನೀತಿ ಸಂಹಿತೆಯ ವಿಧಿ 2.21 ಅನ್ವಯ ಹಂತ 2 ತಪ್ಪೆಸಗಿದ್ದನ್ನು ಒಪ್ಪಿಕೊಂಡಿದ್ದಾರೆ.

ಲಕ್ನೋ ತಂಡದ ಬೌಲರ್‌ ನವೀನ್‌-ಉಲ್-ಹಖ್‌ ಅವರಿಗೂ ಇದೇ ನೀತಿ ಸಂಹಿತೆ ಉಲ್ಲಂಘನೆಗಾಗಿ ಅವರ ಪಂದ್ಯ ಶುಲ್ಕದ ಶೇ50 ಮೊತ್ತವನ್ನು ದಂಡವಾಗಿ ವಿಧಿಸಲಾಗಿದೆ.

Similar News