ಕರ್ನಾಟಕವನ್ನು ದೇಶದಲ್ಲೇ ನಂಬರ್ ಒನ್ ಸ್ಥಾನಕ್ಕೆ ಏರಿಸುವುದು ಬಿಜೆಪಿ ಗುರಿ: ಮುಲ್ಕಿಯಲ್ಲಿ ನರೇಂದ್ರ ಮೋದಿ

ತುಳುವಿನಲ್ಲೇ ಭಾಷಣ ಆರಂಭಿಸಿದ ಪ್ರಧಾನಿ

Update: 2023-05-03 08:32 GMT

ಮಂಗಳೂರು,ಮೇ 3; ರಾಜ್ಯದಲ್ಲಿ ಸುಸ್ಥಿರ ಸರಕಾರ, ದೇಶದಲ್ಲಿ  ಕರ್ನಾಟಕ ರಾಜ್ಯ ವನ್ನು ನಂಬರ್ ಒನ್ ಸ್ಥಾನಕ್ಕೆ ಏರಿಸುವುದು ನಮ್ಮ ಗುರಿ ಅದಕ್ಕಾಗಿ ಬಿಜೆಪಿಯನ್ನು ಬೆಂಬಲಿಸಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಬಳಿಯ ಮೈದಾನದಲ್ಲಿಂದು ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ''ಪರುಶುರಾಮ್ ಕ್ಷೇತ್ರದ ಎನ್ನ ಮೋಕೆದ ತುಳುವಪ್ಪೆ ಜೋಕುಲೆಗ್ ಸೊಲ್ಮೆಲು'' ಎಂದು ತುಳುವಿನಲ್ಲೇ ಭಾಷಣ ಆರಂಭಿಸಿದ ಮೋದಿ, ''ಕರ್ನಾಟಕವನ್ನು ಔದ್ಯೋಗಿಕ ಕ್ಷೇತ್ರದಲ್ಲಿ ಸೂಪರ್ ಪವರ್,ಕೃಷಿ, ಮೀನುಗಾರಿಕೆ, ಶಿಕ್ಷಣ,ಆರೋಗ್ಯ,ಅಭಿವೃದ್ಧಿ ಕ್ಷೇತ್ರದಲ್ಲಿ ನಂಬರ್ ಒನ್ ಮಾಡುವುದು ಬಿಜೆಪಿ ಗುರಿಯಾಗಿದೆ. ಡಬಲ್ ಇಂಜಿನ್ ಸರಕಾರ ಮಹಿಳಾ ಸಶಕ್ತೀಕರಣ,ಪ್ರದಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ,ಬಡವರಿಗೆ ಮನೆ ನಿರ್ಮಾಣ ಯೋಜನೆ ಹಮ್ಮಿಕೊಂಡಿದೆ. ಕರಾವಳಿಯ ಮೀನುಗಾರರ ಯುವಕರ ಬದುಕಿನಲ್ಲಿ ಸಮಗ್ರ ಬದಲಾವಣೆ ಬಿಜೆಪಿಯ ಗುರಿಯಾಗಿದೆ'' ಎಂದು ತಿಳಿಸಿದರು.

'ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ಧಿ ರಿವರ್ಸ್ ಗೇರ್ ನಲ್ಲಿ ಸಾಗುತ್ತದೆ. ಸುಸ್ಥಿರ ಸರಕಾರ ಅವರಿಂದ ಸಾಧ್ಯವಿಲ್ಲ.ಶಾಂತಿ,ಪ್ರಗತಿ ಅವರಿಗೆ ಬೇಕಾಗಿಲ್ಲ. ದೇಶದ ಸೇನೆ , ಸೈನಿಕರನ್ನು ಅವಮಾನಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ.ರಾಷ್ಟ್ರ ವಿರೋಧಿ ಗಳಿಗೆ ಬೆಂಬಲ ನೀಡುತ್ತಿದೆ ಎಂದು ಮೋದಿ ಆರೋಪಿಸಿದ್ದಾರೆ. ದೇಶದ ಪ್ರಜಾಪ್ರಭುತ್ವ, ಅಭಿವೃದ್ಧಿ ವಿಶ್ವ ದ ಪ್ರಶಂಸೆಗೆ ಪಾತ್ರ ವಾಗಿದೆ ಈ ಬಾರಿ ಕರ್ನಾಟಕದಲ್ಲಿ ಬಹುಮತದ ಬಿಜೆಪಿ ಸರಕಾರ ರಚನೆಗೆ ನಿಮ್ಮ ಸಂಕಲ್ಪವಾಗಬೇಕು' ಎಂದು ಮೋದಿ ಮನವಿ ಮಾಡಿದರು.

ಸಮಾರಂಭದ ವೇದಿಕೆಯಲ್ಲಿ  ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸರ್ಕಾರದ ಸಚಿವೆ ಸಂಸದೆ ಶೋಬಾ ಕರಂದ್ಲಾಜೆ, ಸಚಿವ ಸುನಿಲ್ ಕುಮಾರ್, ಶಾಸಕ ಡಾ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್,ವೇದವ್ಯಾಸ ಕಾಮತ್,ಹರೀಶ್ ಪೂಂಜಾ,ಪ್ರತಾಪ್ ಸಿಂಹ ನಾಯಕ್ ,ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡಬಿದ್ರೆ ಹಾಗೂ ಉಭಯ ಜಿಲ್ಲೆ ಗಳ 13 ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಗಳಾದ ಭಾಗೀರಥಿ ಸುಳ್ಯ, ಆಶಾ ತಿಮ್ಮಪ್ಪ ಪುತ್ತೂರು, ಸತೀಶ್ ಕುಂಪಲ ಮಂಗಳೂರು, ಯಶ್ಫಾಲ್ ಸುವರ್ಣ, ಉಪಸ್ಥಿತರಿದ್ದರು. 

ಪ್ರಧಾನಿ ಮೋದಿ ಅವರು ಮುಲ್ಕಿಯ ಸಮಾವೇಶದ ಬಳಿಕ ಉತ್ತರ ಕನ್ನಡ ಜಿಲ್ಲೆಯ ಅಂಕೋಲಕ್ಕೆ ತೆರಳಿದ್ದಾರೆ.

Full View

Similar News