ಐಪಿಎಲ್: ಹೈದರಾಬಾದ್ ವಿರುದ್ಧ ಕೆಕೆಆರ್‌ಗೆ ರೋಚಕ ಜಯ
ಹೈದರಾಬಾದ್, ಮೇ 4: ಕೋಲ್ಕತಾ ನೈಟ್ ರೈಡರ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ತಂಡ ವಿರುದ್ಧದ ಐಪಿಎಲ್ ಟೂರ್ನಿಯ 47ನೇ ಪಂದ್ಯವನ್ನು ಕೊನೆಯ ಓವರ್‌ನಲ್ಲಿ 5 ರನ್ ಅಂತರದಿಂದ ಗೆದ್ದುಕೊಂಡಿದೆ.
ಗುರುವಾರ ನಡೆದ ಪಂದ್ಯದಲ್ಲಿ ಗೆಲ್ಲಲು 172 ರನ್ ಗುರಿ ಬೆನ್ನಟ್ಟಿದ ಹೈದರಾಬಾದ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಹೈದರಾಬಾದ್ ಪರ ನಾಯಕ ಮರ್ಕ್ರಮ್(41 ರನ್,40 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ಹೆನ್ರಿಕ್ ಕ್ಲಾಸನ್(36 ರನ್, 20 ಎಸೆತ), ಅಬ್ದುಲ್ ಸಮದ್( 21 ರನ್, 18 ಎಸೆತ)ರಾಹುಲ್ ತ್ರಿಪಾಠಿ(20 ರನ್,9 ಎಸೆತ) ಹಾಗು ಮಯಾಂಕ್ ಅಗರ್ವಾಲ್(18 ರನ್,11 ಎಸೆತ) ಎರಡಂಕೆಯ ಸ್ಕೋರ್ ಗಳಿಸಿದರು.
ಕೆಕೆಆರ್ ಪರ ಶಾರ್ದೂಲ್ ಠಾಕೂರ್(2-23) ಹಾಗೂ ವೈಭವ್ ಅರೋರ(2-32) ತಲಾ ಎರಡು ವಿಕೆಟ್‌ಗಳನ್ನು ಪಡೆದರು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೆಕೆಆರ್ ತಂಡ ರಿಂಕು ಸಿಂಗ್(46 ರನ್, 35 ಎಸೆತ) ಹಾಗೂ ನಾಯಕ ನಿತಿಶ್ ರಾಣಾ(42 ರನ್, 31 ಎಸೆತ)ಉಪಯುಕ್ತ ಕಾಣಿಕೆಯ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 171 ರನ್ ಗಳಿಸಿತು.
ಆತಿಥೇಯ ಹೈದರಾಬಾದ್ ಪರ ಮಾರ್ಕೊ ಜಾನ್ಸನ್(2-24) ಹಾಗೂ ಟಿ.ನಟರಾಜನ್(2-30) ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು. ನಟರಾಜನ್ ಕೊನೆಯ ಓವರ್‌ನಲ್ಲಿ ಕೇವಲ 3 ರನ್ ನೀಡಿ ಗಮನ ಸೆಳೆದರು. ಕೆಕೆಆರ್ ಕೊನೆಯ ಓವರ್‌ನಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ಕೆಕೆಆರ್ ಪವರ್‌ಪ್ಲೇ ವೇಳೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆಯಿತು.
ಮಧ್ಯಮ ಓವರ್‌ಗಳಲ್ಲಿ ನಿತಿಶ್ ಹಾಗೂ ರಿಂಕು ತಂಡವನ್ನು ಆಧರಿಸಿದರು. ಈ ಜೋಡಿ 4ನೇ ವಿಕೆಟಿಗೆ 61 ರನ್ ಜೊತೆಯಾಟ ನಡೆಸಿತು. ರಾಣಾ ಔಟಾದ ನಂತರ ರಸೆಲ್ ಜೊತೆ 5ನೇ ವಿಕೆಟ್‌ಗೆ 31 ರನ್ ಸೇರಿಸಿದ ರಿಂಕು ಸಿಂಗ್ ತಂಡವು ಸ್ಪರ್ಧಾತ್ಮಕ ಸ್ಕೋರ್ ಗಳಿಸಲು ನೆರವಾದರು.
ಡೆತ್ ಓವರ್‌ನಲ್ಲಿ ಕ್ಷಿಪ್ರವಾಗಿ ವಿಕೆಟ್ ಪಡೆದ ಹೈದರಾಬಾದ್ ಪಂದ್ಯದಲ್ಲಿ ತಿರುಗೇಟು ನೀಡಿತು. ಆ್ಯಂಡ್ರೆ ರಸೆಲ್(24 ರನ್, 15 ಎಸೆತ) ಹಾಗೂ ಜೇಸನ್ ರಾಯ್(20 ರನ್, 19 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.