ಚಿನ್ನಾಭರಣ ಕಳವು : ದೂರು
Update: 2023-05-05 23:14 IST
ಮಂಗಳೂರು: ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಚಿನ್ನಾಭರಣ ಕಳವುಗೈದ ಬಗ್ಗೆ ಮಿಥುನ್ ಕುಮಾರ್ ಎಂಬವರು ದೂರು ನೀಡಿದ್ದಾರೆ.
ಮಿಥುನ್ ಕುಮಾರ್ ಮತ್ತವರ ಪತ್ನಿ ವಸುಮತಿ ಮೇ 4ರಂದು ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ಹೋಗಿದ್ದರು. ವಸುಮತಿ ಅಂದು ಮಧ್ಯಾಹ್ನ 1ಕ್ಕೆ ಊಟ ಮಾಡಲು ಮನೆಗೆ ಬಂದಾಗ ಪ್ರವೇಶ ದ್ವಾರದ ಬಾಗಿಲಿಗೆ ಹಾಕಿದ ಬೀಗವನ್ನು ಯಾರೋ ಕಳ್ಳರು ಮುರಿದು ಒಳಗೆ ಪ್ರವೇಶಿಸಿ 8 ಗ್ರಾಂ ತೂಕದ 1 ರೋಪ್ ಚೈನ್, ಮೂರು ಚಿನ್ನದ ಉಂಗುರಗಳನ್ನು ಕಳವುಗೈದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ