×
Ad

ಜಮ್ಮು-ಕಾಶ್ಮೀರ: ಎನ್‌ಕೌಂಟರ್ ನಲ್ಲಿ ಓರ್ವ ಉಗ್ರನ ಹತ್ಯೆ

Update: 2023-05-06 10:16 IST

ಶ್ರೀನಗರ: ಐವರು ವಿಶೇಷ ಪಡೆ ಯೋಧರು ಹುತಾತ್ಮರಾಗಿರುವ  ಜಮ್ಮ-ಕಾಶ್ಮೀರದ ರಾಜೌರಿ ಜಿಲ್ಲೆಯ ಕಂಡಿ ಅರಣ್ಯ ಪ್ರದೇಶದಲ್ಲಿ ಶನಿವಾರ  ಹೊಸ ಎನ್‌ಕೌಂಟರ್ ನಡೆಯುತ್ತಿದ್ದು ಸೇನೆಯ ಪ್ರಕಾರ, ಒಬ್ಬ ಭಯೋತ್ಪಾದಕನನ್ನು ಕೊಲ್ಲಲಾಗಿದ್ದು, ಮತ್ತೊಬ್ಬ ಗಾಯಗೊಂಡಿದ್ದಾನೆ.

ಅರಣ್ಯ ಪ್ರದೇಶಗಳಲ್ಲಿ ಗುಹೆಗಳಲ್ಲಿ ಅಡಗಿದ್ದಾರೆ ಎಂದು ನಂಬಲಾದ ಭಯೋತ್ಪಾದಕರನ್ನು ಹೊರಹಾಕಲು 'ಆಪರೇಷನ್ ತ್ರಿನೇತ್ರ' ಭಾಗವಾಗಿ ಭದ್ರತಾ ಪಡೆಗಳ ದೊಡ್ಡ ಬಳಗವು  ಪ್ರದೇಶಕ್ಕೆ ಧಾವಿಸಿದೆ.

"ರಾಜೌರಿ ಸೆಕ್ಟರ್‌ನ ಕಂಡಿ ಅರಣ್ಯದಲ್ಲಿ ಈಗ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ  ಮೇ 6 ರಂದು ಭಯೋತ್ಪಾದಕರ ನೆಲೆ ಪತ್ತೆ ಯಾಗಿದ್ದು, ಗುಂಡಿನ ದಾಳಿ ಆರಂಭವಾಗಿದೆ" ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶನಿವಾರ ರಾಜೌರಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸುವ ನಿರೀಕ್ಷೆಯಿದೆ.

ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಡಿಜಿಪಿ ಹಾಗೂ ಇತರ ಉನ್ನತ ಅಧಿಕಾರಿಗಳು ಈಗಾಗಲೇ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.

Similar News