×
Ad

ಮಣಿಪುರ: ಮನೆಯಿಂದ ಹೊರಗೆ ಎಳೆದೊಯ್ದು ಐ-ಟಿ ಇಲಾಖೆ ಅಧಿಕಾರಿಯ ಹತ್ಯೆ

Update: 2023-05-06 10:40 IST

ಇಂಫಾಲ: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ವೇಳೆ  ಇಂಫಾಲ್‌ನಲ್ಲಿ ನಿಯೋಜನೆಗೊಂಡಿರುವ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರನ್ನು ಅವರ ಅಧಿಕೃತ ನಿವಾಸದಿಂದ  ಹೊರಗೆ "ಎಳೆದುಹಾಕಲಾಯಿತು ಹಾಗೂ ಅವರನ್ನು  ಹತ್ಯೆಗೈಯ್ಯಲಾಗಿದೆ ಎಂದು ಭಾರತೀಯ ಕಂದಾಯ ಸೇವೆ (IRS) ಅಸೋಸಿಯೇಷನ್ ಶುಕ್ರವಾರ ತಿಳಿಸಿದೆ.

ಈ ಕುರಿತು ಟ್ವೀಟಿಸಿರುವ ಅಸೋಸಿಯೇಶನ್ "ಇಂಫಾಲ್‌ನಲ್ಲಿನ ತೆರಿಗೆ ಸಹಾಯಕರಾದ ಲೆಟ್ಮಿಂಥಾಂಗ್ ಹಾಕಿಪ್ ಅವರ ಸಾವಿಗೆ ಕಾರಣವಾದ ಹಿಂಸಾಚಾರದ ಭೀಕರ ಕೃತ್ಯವನ್ನ ನಾವು  ಬಲವಾಗಿ ಖಂಡಿಸುತ್ತೇವೆ ಎಂದಿದೆ.

ಕರ್ತವ್ಯದಲ್ಲಿರುವ ಅಮಾಯಕ ಸಾರ್ವಜನಿಕ ಸೇವಕನ ಹತ್ಯೆಯನ್ನು ಯಾವುದೇ ಕಾರಣ ಅಥವಾ ಸಿದ್ಧಾಂತ ಸಮರ್ಥಿಸುವುದಿಲ್ಲ. ಈ ಕಷ್ಟದ ಸಮಯದಲ್ಲಿ ನಮ್ಮ ಯೋಚನೆಗಳು ಅವರ ಕುಟುಂಬದೊಂದಿಗೆ ಇವೆ ”ಎಂದು ಅಸೋಸಿಯೇಶನ್  ಹೇಳಿದೆ.

Similar News