ಹಿರಿಯ ಪತ್ರಕರ್ತ ರವೀಶ್ ಕುಮಾರ್ ತಾಯಿ ನಿಧನ
Update: 2023-05-06 14:42 IST
ಪಾಟ್ನಾ: ದೀರ್ಘಕಾಲದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಹಿರಿಯ ಪತ್ರಕರ್ತ ರವೀಶ್ ಕುಮಾರ್ ಅವರ ತಾಯಿ ಯಶೋಧಾ ಪಾಂಡೆ ಮಂಗಳವಾರ(ಮೇ 2)ದಂದು ನಿಧನರಾಗಿದ್ದಾರೆ.
ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್, "ಹಿರಿಯ ಪತ್ರಕರ್ತ ರವೀಶ್ ಕುಮಾರ್ ಅವರ ತಾಯಿ ಯಶೋಧಾ ಪಾಂಡೆಯವರ ನಿಧನದಿಂದ ದುಃಖವಾಗಿದೆ. ಅವರು ಸಾಮಾಜಿಕ ಹಾಗೂ ಧಾರ್ಮಿಕ ಶ್ರದ್ಧೆಯ ಮಹಿಳೆಯಾಗಿದ್ದರು. ಅವರ ಆತ್ಮಕ್ಕೆ ಶಾಂತಿ ನೀಡುವಂತೆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.
ಮೂಲತಃ ಬಿಹಾರದ ಮೋತಿಹಾರಿಯವರಾದ ರವೀಶ್ ಕುಮಾರ್ ತಮ್ಮ ತಾಯಿ ನಿಧನರಾದಾಗ ಬ್ರಸೆಲ್ಸ್ ಪ್ರವಾಸದಲ್ಲಿದ್ದರು. ತಮ್ಮ ತಾಯಿಯ ನಿಧನದ ಸುದ್ದಿ ತಿಳಿದ ಅವರು ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.