×
Ad

ಕಾಂಗ್ರೆಸ್ ಅಧ್ಯಕ್ಷರಿಗೆ ವಿಎಚ್‌ಪಿ ನೋಟಿಸ್; 100 ಕೋಟಿ ಪರಿಹಾರ ಕೋರಿಕೆ

Update: 2023-05-06 21:55 IST

ಹೊಸದಿಲ್ಲಿ, ಮೇ 6: ಪಕ್ಷದ ಕರ್ನಾಟಕ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗ ದಳದ ವಿರುದ್ಧ ಮಾನಹಾನಿಕರ ಹೇಳಿಕೆಗಳನ್ನು ನೀಡಲಾಗಿದೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷದ್, ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಕಾನೂನು ನೋಟಿಸ್ ನೀಡಿದೆ ಹಾಗೂ 100 ಕೋಟಿ ರೂ.ಗೂ ಅಧಿಕ ಪರಿಹಾರ ನೀಡುವಂತೆ ಕೋರಿದೆ.

ಈ ನೋಟಿಸನ್ನು ವಿಶ್ವ ಹಿಂದೂ ಪರಿಷದ್‌ನ ಚಂಡೀಗಢ ಘಟಕ ಮತ್ತು ಅದರ ಯುವ ವಿಭಾಗ ಬಜರಂಗ ದಳ ಮೇ 4ರಂದು ನೀಡಿದೆ ಹಾಗೂ 14 ದಿನಗಳೊಳಗೆ ಪರಿಹಾರ ನೀಡುವಂತೆ ಒತ್ತಾಯಿಸಿದೆ.

ಈ ಬಗ್ಗೆ ಪ್ರತಿಕ್ರಿಯೆ ಕೋರಿ ಸಲ್ಲಿಸಲಾಗಿರುವ ಪ್ರಶ್ನೆಗಳಿಗೆ ಕಾಂಗ್ರೆಸ್ ಪಕ್ಷ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Similar News