ಲೈಂಗಿಕ ಕಿರುಕುಳ ಪ್ರಕರಣ: ಇನ್ನೂ ನಡೆಯದ ಬ್ರಿಜ್ ಭೂಷಣ್ ವಿಚಾರಣೆ
Update: 2023-05-06 23:28 IST
ಹೊಸದಿಲ್ಲಿ, ಮೇ 6: ಲೈಂಗಿಕ ಕಿರುಕುಳದ ಆರೋಪದಲ್ಲಿ ದಾಖಲಿಸಲಾದ ಎರಡು ಎಫ್‌ಐಆರ್‌ಗಳಿಗೆ ಸಂಬಂಧಿಸಿ ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ದಿಲ್ಲಿ ಪೊಲೀಸರು ಇದುವರೆಗೆ ವಿಚಾರಣೆಗೆ ಒಳಪಡಿಸಿಲ್ಲ.
14 ದಿನಗಳ ಹಿಂದೆ ಎಫ್‌ಐಆರ್ ದಾಖಲಿಸಿದ ಹೊರತಾಗಿಯೂ ಬ್ರಿಜ್ ಭೂಷಣ್ ಶರಣ್ ಸಿಂಗ್‌ಗೆ ಪೊಲೀಸರು ಇನ್ನಷ್ಟೇ ಸಮನ್ಸ್ ನೀಡಬೇಕಿದೆ ಎಂದು ಮೂಲಗಳು ತಿಳಿಸಿವೆ.
‘‘ನಾವು 7 ಮಂದಿ ಕುಸ್ತಿಪಟುಗಳ ಹೇಳಿಕೆಯನ್ನು ದಾಖಲಿಸಿಕೊಂಡಿದ್ದೇವೆ. ಬ್ರಿಜ್ ಭೂಷಣ್ ಶರಣ್ ಸಿಂಗ್‌ಗೆ ಶೀಘ್ರದಲ್ಲಿ ಸಮನ್ಸ್ ರವಾನಿಸಲಿದ್ದೇವೆೆ’’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.