ಕರ್ನಾಟಕಕ್ಕೆ ಭ್ರಷ್ಟಾಚಾರವೇ ದೊಡ್ಡ ಆತಂಕವಾಗಿದೆ: ಪ್ರಿಯಾಂಕಾ ಗಾಂಧಿ

ಮುಲ್ಕಿ ಕೊಲ್ನಾಡು ಬಳಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

Update: 2023-05-07 12:27 GMT

ಮಂಗಳೂರು, (ಮುಲ್ಕಿ), ಮೇ 7: ಕರ್ನಾಟಕಕ್ಕೆ ಭ್ರಷ್ಟಾಚಾರವೇ ದೊಡ್ಡ ಆತಂಕವಾಗಿದೆ ಎಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ.

ಅವರು ಇಂದು ಮುಲ್ಕಿ ಕೊಲ್ನಾಡು ಬಳಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾ ಡುತ್ತಿದ್ದರು.

ಚುನಾವಣೆಯ ಸಂದರ್ಭ ದೇಶದ ಪ್ರಧಾನಿ, ಬಿಜೆಪಿ ಮುಖಂಡರು ಧರ್ಮ, ಜಾತಿ ಆತಂಕವಾದ ಬಗ್ಗೆ ಮಾತನಾಡು ತ್ತಾರೆ. ಆದರೆ ಕರ್ನಾಟಕದ  ಜನರು ನಿಜವಾಗಿ ಆತಂಕ ಪಡುವಂತಹ 40 ಪರ್ಸೆಂಟ್ ಭ್ರಷ್ಟಾಚಾರ, ರೈತರ, ನಿರುದ್ಯೋಗಿಗಳ ಕಾರ್ಮಿಕರ ಆತ್ಮಹತ್ಯೆ, ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಯಂತಹ ಸಂಗತಿ ಯಾಗಿದೆ. ನಂದಿನಿಯನ್ನು ಅಮೂಲ್ ಜೊತೆ ವಿಲೀನಗೊಳಿಸುವ ಯತ್ನ ರಾಜ್ಯದ ಜನರನ್ನು ಆತಂಕಕ್ಕೆ ಈಡು ಮಾಡಿದೆ. ಇಂದಿರಾ ಗಾಂಧಿ ಇಲ್ಲಿನ ಬ್ಯಾಂಕ್ ಗಳನ್ನು ರಾಷ್ಟ್ರೀಕರಣ ಮಾಡಿ  ಜನರಿಗೆ ಸೇವೆ ನೀಡಿದರೆ. ಪ್ರಧಾನಿ ಮೋದಿ ಈ ಬ್ಯಾಂಕ್ ಗಳನ್ನು ವಿಲೀನ ಮಾಡಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದರು.

ಕರ್ನಾಟಕದಲ್ಲಿ ಪದವಿಧರ ನಿರುದ್ಯೋಗಿ ಯುವಕರಿಗೆ ಮಾಸಿಕ 2000 ರೂ., ಡಿಪ್ಲೊಮಾ ಮಾಡಿದ ನಿರುದ್ಯೋಗಿ ಗಳಿಗೆ ಮಾಸಿಕ 1500 ರೂಪಾಯಿ ನೀಡುವ ಯುವ ನಿಧಿ ಕಾರ್ಯಕ್ರಮ, ಪ್ರತಿ ಕುಟುಂಬದ ಒಡತಿಗೆ ಮಾಸಿಕ ರೂ.2000 ನೀಡುವ ಗೃಹ ಲಕ್ಷ್ಮೀ ಯೋಜನೆ, ಬಡವರಿಗೆ ಪ್ರತಿ ತಿಂಗಳು 10 ಕೆ.ಜಿ ಅಕ್ಕಿ ನೀಡುವ ಯೋಜನೆ, ಮಹಿಳೆಯರಿಗೆ ಸರಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣ ಮೊದಲಾದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ಗಳು ಕರ್ನಾಟಕದಲ್ಲಿ ಜಾರಿಯಾಗಲಿದೆ. ತುಳು ಭಾಷೆಯನ್ನು ಎಂಟನೆ ಪರಿಚ್ಛೇದದಲ್ಲಿ ಸೇರಿಸುವ ಹಾಗೂ ಕರಾವಳಿಯ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲು ಬದ್ಧವಾಗಿದೆ. ರಾಜ್ಯ ದಲ್ಲಿ ಭರ್ತಿ ಯಾಗದೆ ಖಾಲಿ ಉಳಿದಿರುವ ಎರಡೂವರೆ ಲಕ್ಷ ಉದ್ಯೋಗವನ್ನು ಭರ್ತಿ ಮಾಡಲು ಕ್ರಮ ಕೈ ಗೊಳ್ಳಲಿದೆ. ಈ ಬಗ್ಗೆ ಸಂದೇಹ ಬೇಡ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವ ಛತ್ತೀಸ್ ಗಡ್‌, ರಾಜಸ್ಥಾನ ದಲ್ಲಿ ಕಾಂಗ್ರೆಸ್ ನೀಡಿದ ಭರವಸೆ ಈಡೇರಿಸಿದೆ ಎಂದು ಪ್ರಿಯಾಂಕಾ ತಿಳಿಸಿದ್ದಾರೆ.

ಸಮಾರಂಭದಲ್ಲಿ ಮಾಜಿ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿ, ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಹರೀಶ್ ಕುಮಾರ್, ಶಾಸಕ ಯು.ಟಿ.ಖಾದರ್, ಬಿ.ಕೆ. ಹರಿಪ್ರಸಾದ್, ಮಂಜುನಾಥ ಭಂಡಾರಿ, ಮಾಜಿ ಸಚಿವರಾದ ಅಭಯಚಂದ್ರ ಜೈನ್, ಎಐಸಿಸಿ ವಕ್ತಾರರಾದ  ಚರಣ್ ಸಿಂಗ್ ಸಪ್ರಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರೋಜಿ ಎಂ ಜೋನ್, ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿ, ಮಾಜಿ ಸಂಸದ ಇಬ್ರಾಹಿಂ ಹಾಗೂ ಕಾಂಗ್ರೆಸ್ ಮುಖಂಡ ರಾದ ಆರತಿಕೃಷ್ಣ, ಮುಹಮ್ಮದ್ ಮಸೂದ್, ಇಬ್ರಾಹಿಂ ಕೋಡಿಜಾಲ್, ಜಿ.ಎ.ಬಾವ, ಭರತ್ ಮುಂಡೋಡಿ, ಲುಕ್ಮಾನ್ ಬಂಟ್ವಾಳ, ನಿಕೇತ್ ರಾಜ್, ಶಾಲೆಟ್ ಪಿಂಟೋ , ಮಮತಾ ಗಟ್ಟಿ, ಅಭ್ಯರ್ಥಿ ಗಳಾದ ಇನಾಯತ್ ಅಲಿ (ಮಂಗಳೂರು ಉತ್ತರ ) ಮಿಥುನ್ ರೈ (ಮೂಡಬಿದ್ರೆ )  ಮೊದಲಾದವರು ಉಪಸ್ಥಿತರಿದ್ದರು.

Similar News