ಎಸೆಸೆಲ್ಸಿ ಪರೀಕ್ಷೆ: ದ.ಕ. ಜಿಲ್ಲೆಗೆ ಶೇ 89.52 ಫಲಿತಾಂಶ

Update: 2023-05-08 16:07 GMT

ಮಂಗಳೂರು: ಈ ಬಾರಿಯ ಎಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆ ಶೇ 89.52 ಫಲಿತಾಂಶ ದಾಖಲಿಸಿದೆ. ಕಳೆದ ವರ್ಷಕ್ಕಿಂತ ಫಲಿತಾಂಶದಲ್ಲಿ ಅಲ್ಪ ಸುಧಾರಣೆಯಾಗಿದೆ.

ಜಿಲ್ಲೆಯಲ್ಲಿ 27,170 ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 24,322 ಮಂದಿ ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ (2021-22)  28,443 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 25,052 ಮಂದಿ ಉತ್ತೀರ್ಣರಾಗಿ ಶೇ 88.08 ಫಲಿತಾಂಶ ದಾಖಲಾಗಿತ್ತು. ಈ ಬಾರಿ ಜಿಲ್ಲೆಯಲ್ಲಿ 125 ಶಾಲೆಗಳು ಶೇ 100 ಫಲಿತಾಂಶ ದಾಖಲಿಸಿದೆ. 35 ಸರಕಾರಿ, 8 ಅನುದಾನಿತ, 82 ಅನುದಾನರಹಿತ ಶಾಲೆಗಳು ಶೇ 100 ಸಾಧನೆ ಮಾಡಿವೆ. ಬಂಟ್ವಾಳ ವಲಯದ 20, ಬೆಳ್ತಂಗಡಿ 24, ಮಂಗಳೂರು ಉತ್ತರ 19, ಮಂಗಳೂರು ದಕ್ಷಿಣ 22, ಮೂಡಬಿದ್ರೆ 11, ಪುತ್ತೂರು 19 ಮತ್ತು ಸುಳ್ಯದ 10 ಶಾಲೆಗಳು ಶೇ 100 ಫಲಿತಾಂಶ ಪಡೆದಿವೆ.

ಆಂಗ್ಲ ಮಾಧ್ಯಮದಲ್ಲಿ 7 ಮಂದಿ ಅಗ್ರ: ಆಂಗ್ಲ ಮಾಧ್ಯಮದಲ್ಲಿ 7 ಮಂದಿ  ಗರಿಷ್ಠ 623 ಅಂಕಗಳನ್ನು ಪಡೆದಿದ್ದಾರೆ. ಅವರೆಂದರೆ  ಮಂಗಳೂರಿನ ಉರ್ವಾ ಕೆನರಾ ಹೈಸ್ಕೂಲ್‌ನ  ಬಾಲಕ ಅವಿನಾಶ್ ಬಿ, ಕಿನ್ನಿಗೋಳಿ ಮೇರಿವೆಲೆ  ಹೈಸ್ಕೂಲ್‌ನ ಬಾಲಕ ಡೊವಿನಿಕ್ ರಾನ್ಸನ್ ಡಿ ಸೋಜ, ಮೂಡಬಿದ್ರೆ ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ  ಬಾಲಕ ಪ್ರಣಾಮ್ ಎನ್. ಶೆಟ್ಟಿ, ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಬಾಲಕಿ ಹಿಮಾನಿ ಎ.ಸಿ, ಕಾಣಿಯೂರು ಪ್ರಗತಿ ಪ್ರೌಢ ಶಾಲೆಯ  ಬಾಲಕ ಉತ್ತಮ ಜಿ, ನರಿಮೊಗರು ಸಾಂದಿಪನಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ  ಬಾಲಕಿ ತೇಜಸ್ ಎಸ್. ಆರ್ ಮತ್ತು ಸುಬ್ರಹ್ಮಣ್ಯದ ಕುಮಾರಸ್ವಾಮಿ  ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ  ಬಾಲಕಿ ಮಹಾಥಿ ಬಿ ಅಗ್ರ ಸ್ಥಾನ ಗಳಿಸಿದ್ದಾರೆ.

8 ಮಂದಿಗೆ 622 ಅಂಕ: ಆಂಗ್ಲ ಮಾಧ್ಯಮದಲ್ಲಿ 8 ಮಂದಿ 622 ಅಂಕಗಳನ್ನು ಪಡೆದು 2ಸ್ಥಾನ ಹಂಚಿಕೊಂಡಿದ್ದಾರೆ.

ಬೆಳ್ತಂಗಡಿ ಶ್ರೀ ಧರ್ಮಸ್ಥಳ  ಮಂಜುನಾಥೇಶ್ವರ ಆಂಗ್ಲ  ಮಾಧ್ಯಮ ಶಾಲೆಯ ಬಾಲಕ ಅಭಿಷೇಕ್ ವಿ.ಎಂ, ಉರ್ವಾ ಕೆನರಾ ಕೆನರಾ ಪ್ರೌಢ ಶಾಲೆಯ ಬಾಲಕ ಅಕ್ಷಜ್ ನಂಬೂದಿರಿ, ಉಚ್ಚಿಲ  ಸೋಮೇಶ್ವರ ಉಚ್ಚಿಲ ಬೋವಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಬಾಲಕಿ ಆಯಿಷಾ, ಮೂಡಬಿದ್ರೆಯ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ  ಬಾಲಕ ಶ್ರೇಯಾಂಕ ಮನೋಹರ ಪೈ,  ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯ ಪ್ರೌಢಶಾಲೆಯ ಬಾಲಕ ವಿಷ್ಣು ಪ್ರಸಾದ್ , ಸುಳ್ಯ ರೋಟರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ  ಬಾಲಕಿ ಕೀರ್ತನಾ ಸಿ.ವಿ,  ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್(ಸರಕಾರಿ)  ಬಾಲಕಿ ದ್ವೀಥಿ ಎಸ್, ಸುಬ್ರಹ್ಮಣ್ಯದ ಕುಮಾರಸ್ವಾಮಿ  ಆಂಗ್ಲ ಮಾಧ್ಯಮ ಶಾಲೆಯ ಬಾಲಕಿ ಅಭಿಜ್ಞಾ 622 ಅಂಕಗಳನ್ನು ಗಳಿಸಿದ್ದಾರೆ.

ಕನ್ನಡ ಮಾಧ್ಯಮಾದಲ್ಲಿ 622 ಗರಿಷ್ಠ: ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯ ಬಾಲಕಿಯರಾದ ಸ್ಪಂದನಾ ಮಹಾಂತೇಶ್ ಮುರಾಗೋಡ್  622 ಅಂಕಗಳೊಂದಿಗೆ ಜಿಲ್ಲೆಯಲ್ಲಿ ಕನ್ನಡ ಮಾಧ್ಯಮ ಶಾಲೆಗಳ ವಿಭಾಗದಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ. ಅದೇ ಶಾಲೆಯ ಬಾಲಕಿ ಶಾರದಾ ಸತೀಶ್ ಕಣಕಣವಾಡಿ 621 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ.

Similar News