ಉಡುಪಿ: ಕಾರು ಢಿಕ್ಕಿ; ದ್ವಿಚಕ್ರ ವಾಹನ ಸವಾರ ಮೃತ್ಯು
Update: 2023-05-08 22:19 IST
ಉಡುಪಿ: ಕಾರೊಂದು ಸ್ಕೂಟರಿಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಇಂದು ಸಂಜೆ ಅಂಬಾಗಿಲು ಸಮೀಪದ ದುರ್ಗಾ ಜನರಲ್ ಸ್ಟೋರ್ ಎದುರು ನಡೆದಿದೆ.
ಮೃತರನ್ನು ಪುತ್ತೂರು ಗ್ರಾಮದ ಹನುಮಂತನಗರದ ರವಿಚಂದ್ರ ದೇವಾಡಿಗ (57) ಎಂದು ಗುರುತಿಸಲಾಗಿದೆ. ಇವರು ದುರ್ಗಾ ಜನರಲ್ ಸ್ಟೋರ್ ಎದುರು ತನ್ನ ಸ್ಕೂಟರ್ ನಲ್ಲಿ ಡಿವೈಡರ್ ಬಳಿ ಸೂಚನೆ ನೀಡಿ ತಿರಗಿಸುತ್ತಿರುವಾಗ ಅದೇ ರಸ್ತೆಯಲ್ಲಿ ಬರುತ್ತಿದ್ದ ಮಾರುತಿ ಆಲ್ಟೋ ಕಾರು ಸ್ಕೂಟರ್ ಗೆ ಹಿಂದಿನಿಂದ ಡಿಕ್ಕಿ ಹೊಡೆಯಿತು.
ಇದರಿಂದ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ತಲೆಗೆ ಗಂಭೀರ ಸ್ವರೂಪದ ಗಾಯಗೊಂಡ ಇವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದುಬಂದಿದೆ.
ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.