×
Ad

ಮತದಾನ ಕೇಂದ್ರದೊಳಗೆ ಮೊಬೈಲ್ ನಿಷೇಧ: ಉಡುಪಿ ಡಿಸಿ ಕೂರ್ಮಾರಾವ್

Update: 2023-05-09 21:03 IST

ಉಡುಪಿ, ಮೇ 9: ಮತದಾನ ಕೇಂದ್ರದ 100 ಮೀ. ವ್ಯಾಪ್ತಿಯೊಳಗೆ ಮತಗಟ್ಟೆ ಅಧಿಕಾರಿಯನ್ನು ಹೊರತು ಪಡಿಸಿ ಮತದಾರರು ಸೇರಿದಂತೆ ಉಳಿದ ಯಾರಿಗೂ ಮೊಬೈಲ್ ತೆಗೆದುಕೊಂಡು ಹೋಗುವುದಕ್ಕೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ.

ಮೊಬೈಲ್ ಫೋನ್, ಕಾರ್ಡ್‌ಲೆಸ್ ಪೋನ್‌ಗಳನ್ನು ಮತದಾನ ಕೇಂದ್ರದೊಳಗೆ ಕೊಂಡೊಯ್ಯುವುದನ್ನು ನಿಬಂಧಿಸಲಾಗಿದೆ ಎಂದು ಚುನಾವಣಾಧಿಕಾರಿಯಾಗಿರುವ ಕೂರ್ಮಾರಾವ್ ಎಂ. ಹೇಳಿದ್ದಾರೆ.

ಅಲ್ಲದೇ ಮತದಾನ ಕೇಂದ್ರದ 100 ಮೀ. ವ್ಯಾಪ್ತಿಯೊಳಗೆ, ಯಾವುದೇ ಸಾರ್ವಜನಿಕ ಹಾಗೂ ಖಾಸಗಿ ಜಾಗಗಳಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳುವಂತಿಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.

ಮತದಾನ ಕೇಂದ್ರದೊಳಗೆ ಯಾವುದೇ ಇಲೆಕ್ಟ್ರಾನಿಕ್ಸ್ ಉಪಕರಣಗಳನ್ನು ತೆಗೆದುಕೊಂಡು ಹೋಗಲು ಅವಕಾಶ ನಿರಾಕರಿಸಲಾಗಿದೆ.
ಮತದಾನವು ನಾಳೆ ಬೆಳಗ್ಗೆ 7:00ರಿಂದ ಸಂಜೆ 6:00ಗಂಟೆಯವರೆಗೆ ನಡೆಯಲಿದೆ.

Similar News