ಉಮೇಶ್‌ ಪಾಲ್‌ ಹತ್ಯೆ ಆರೋಪಿ ಎಂದು ಹೇಳಿ ತಪ್ಪಾದ ವ್ಯಕ್ತಿಯ ವೀಡಿಯೋ ಶೇರ್‌ ಮಾಡಿದ ಹಲವು ಸುದ್ದಿ ವಾಹಿನಿಗಳು

Update: 2023-05-10 07:18 GMT

ಚಂಡೀಗಢ: ಗ್ಯಾಂಗ್‌ಸ್ಟರ್-‌ ರಾಜಕಾರಣಿ ಅತೀಕ್‌ ಅಹ್ಮದ್‌ ಹತ್ಯೆಯಾದಂದಿನಿಂದ ಸುದ್ದಿಯಲ್ಲಿರುವ ಹೆಸರು ಗುಡ್ಡು ಮುಸ್ಲಿಂ ಆಗಿದೆ. ಇದೀಗ ಈ ಹೆಸರು ಟ್ರೆಂಡಿಂಗ್‌ ಆಗುತ್ತಿದೆ. ಹಲವಾರು ಮಾದ್ಯಮಗಳು ಒಡಿಶಾದ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಅಲೆದಾಡುತ್ತಿರುವ ವೀಡಿಯೋ ಪೋಸ್ಟ್‌ ಮಾಡಿ ಈತ  ತಲೆಮರೆಸಿಕೊಂಡಿರುವ ಆರೋಪಿ ಗುಡ್ಡು ಮುಸ್ಲಿಂ ಎಂದು ಹೇಳಿಕೊಂಡಿರುವುದೇ ಇದಕ್ಕೆ ಕಾರಣ.

ಈ ವೀಡಿಯೋ ವೈರಲ್‌ ಆಗುತ್ತಿದ್ದಂತೆಯೇ ಗುಡ್ಡು ಮುಸ್ಲಿಂ ಎಂದೇ ತಿಳಿಯಲಾಗಿರುವ ಒಡಿಶಾದ ವ್ಯಕ್ತಿ ಮತ್ತೆ ಕ್ಯಾಮೆರಾಗಳ ಮುಂದೆ ಬಂದು ತಾನು ಗುಡ್ಡು ಮುಸ್ಲಿಂ ಅಲ್ಲ, ಶೇಖ್‌ ಹಮೀದ್‌ ಮೊಹಮ್ಮದ್‌ ಎಂದು ಸ್ಪಷ್ಟೀಕರಣ ನೀಡಿದ್ದಾರೆ ಹಾಗೂ ಸುದ್ದಿ ಚಾನೆಲ್‌ಗಳು ತಪ್ಪಾಗಿ ತನ್ನನ್ನು ಗುಡ್ಡು ಮುಸ್ಲಿಂ ಎಂದು ಬಿಂಬಿಸುತ್ತಿವೆ ಎಂದು ಹೇಳಿದ್ದಾರೆ. ತಾನು ಬರ್ಗರ್ಹ್‌ ಜಿಲ್ಲೆಯ ಸೊಹೇಲ ಗ್ರಾಮದನವೆಂದೂ ಆತ ಹೇಳಿಕೊಂಡಿದ್ದಾನೆ.

ಈ ರೀತಿ ಸುಳ್ಳು ಸುದ್ದಿ ಪ್ರಕಟಿಸಿದ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆತ ಹೇಳಿದ್ದಾನೆ.

ಉತ್ತರ ಪ್ರದೇಶದಲ್ಲಿ ಉಮೇಶ್‌ ಪಾಲ್‌ ಹತ್ಯೆ ಪ್ರಕರಣದ 10 ಆರೋಪಿಗಳಲ್ಲಿ ಗುಡ್ಡು ಮುಸ್ಲಿಂ ಒಬ್ಬನಾಗಿದ್ದಾನೆ. ಈ ಹತ್ತು ಮಂದಿಯಲ್ಲಿ ಆರು ಮಂದಿಯನ್ನು ಹತ್ಯೆಗೈಯ್ಯಲಾಗಿದ್ದರೆ ಗುಡ್ಡು ಮುಸ್ಲಿಂ ಸಹಿತ ಇತರ ನಾಲ್ಕು ಮಂದಿ ತಲೆಮರೆಸಿಕೊಂಡಿದ್ದಾರೆ.

Similar News