×
Ad

ಕುಂದಾಪುರ ಕೋಡಿ: ಬೀಚ್ ಸ್ವಚ್ಥತಾ ಕಾರ್ಯಕ್ರಮದ ಅಂಗವಾಗಿ ಚಿತ್ರಕಲಾ ಸ್ಪರ್ಧೆ

Update: 2023-05-12 21:24 IST

ಉಡುಪಿ, ಮೇ 12: ಜಿ-20 ಮೆಗಾ ಬೀಚ್ ಕ್ಲೀನ್ ಅಭಿಯಾನದಡಿ ಜಿಲ್ಲೆಯ ಕುಂದಾಪುರ ಕೋಡಿ ಬೀಚ್‌ನಲ್ಲಿ ಸ್ವಚ್ಛ ಬೀಚ್‌ಗಳು ಮತ್ತು ಮಾಲಿನ್ಯ ಮುಕ್ತ ಸಾಗರಗಳ ಪ್ರಾಮುಖ್ಯತೆ ಬಗ್ಗೆ ಸ್ಥಳೀಯ ಸಮುದಾಯಗಳನ್ನು ಸಂವೇದಾನ ಶೀಲಗೊಳಿಸಲು ಮೇ 21ರಂದು ಬೆಳಗ್ಗೆ 7ರಿಂದ 9ರವರೆಗೆ ಸಾಮೂಹಿಕ ಬೀಚ್ ಸ್ವಚ್ಛತಾ ಅಭಿಯಾನ ಆಯೋಜಿಸಲಾಗಿದೆ.

ಈ ಹಿನ್ನೆಲೆಯಲ್ಲಿ  ‘ಕುಂದಾಪುರ ಕೋಡಿ ಬೀಚ್: ಹಾಟ್‌ಸ್ಪಾಟ್ ಫಾರ್ ಆಲಿವ್ ರೈಡ್ಲೀ ಸೀ ಟರ್ಟಲ್ಸ್’ ( 5ರಿಂದ 7 ನೇ ತರಗತಿವರೆಗೆ), ಮಲ್ಪೆ ಬೀಚ್: ಮೈ ಬೀಚ್ ಮೈ ಪ್ರೈಡ್ (8ರಿಂದ 10 ನೇ ತರಗತಿವರೆಗೆ) ಹಾಗೂ ಲಿಟ್ಟರ್ ಫ್ರೀ ಬೀಚಸ್ (ಮುಕ್ತ ವಿಭಾಗ) ವಿಷಯಗಳ ಕುರಿತು ಚಿತ್ರಕಲಾ ಸ್ಫರ್ಧೆಯನ್ನು ಆಯೋಜಿಸಲಾಗುವುದು.

ಸ್ಪರ್ಧಾಳುಗಳು ಸ್ವಯಂ ಪ್ರೇರಣೆಯಿಂದ ಅಡಿಕೆ ಹಾಳೆಯ ಮೇಲೆ ಚಿತ್ರಗಳನ್ನು ಬರೆದು  ಮೇ 18 ರ ಸಂಜೆ 5 ಗಂಟೆಯ ಒಳಗಾಗಿ ಕುಂದಾಪುರ ಮುಖ್ಯ ರಸ್ತೆ ರಾಧಾ ಮೆಡಿಕಲ್ಸ್‌ನ ಹಿಂಬದಿಯ ಸಾಧನಾ ಕಲಾ ಸಂಗಮ, ಮಣಿಪಾಲ ರಜತಾದ್ರಿಯ ಪ್ರಾದೇಶಿಕ ನಿರ್ದೇಶಕರ (ಪರಿಸರ) ಕಚೇರಿ, ಅಥವಾ ಮಂಗಳೂರು ಬೊಕ್ಕಪಟ್ನ ಎಕ್ಯೂಸಿ ಕ್ರೂಸ್‌ಆರ್ಟ್ ಥೆರಾಪಿ ಇಲ್ಲಿಗೆ ಸಲ್ಲಿಸಬಹುದು. 

ಸ್ಪರ್ಧಾ ವಿಜೇತರಿಗೆ ಪ್ರತಿ ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ನೀಡಲಾಗುವುದು ಎಂದು ಉಡುಪಿಯ ಪ್ರಾದೇಶಿಕ ನಿರ್ದೇಶಕರು (ಪರಿಸರ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Similar News