“ಐ ಯಾಮ್‌ ಅನ್‌ಸ್ಟಾಪೇಬಲ್”: ರಾಹುಲ್‌ ಗಾಂಧಿ ವೀಡಿಯೋ ಜೊತೆಗೆ ಹಾಡು ಪೋಸ್ಟ್‌ ಮಾಡಿದ ಕಾಂಗ್ರೆಸ್‌

Update: 2023-05-13 06:03 GMT

ಹೊಸದಿಲ್ಲಿ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಸ್ಪಷ್ಟ ಮುನ್ನಡೆ ಸಾಧಿಸುವುದರೊಂದಿಗೆ ಪಕ್ಷದ ಗೆಲುವು ಬಹುತೇಕ ಖಚಿತಗೊಳ್ಳುತ್ತಿರುವ ನಡುವೆ ಇಂದು ಕಾಂಗ್ರೆಸ್‌ ಪಕ್ಷ ರಾಹುಲ್‌ ಗಾಂಧಿ ಅವರ ವೀಡಿಯೋವೊಂದನ್ನು ಶೇರ್‌ ಮಾಡಿದೆ.

ವೀಡಿಯೋ ಜೊತೆಗೆ ಖ್ಯಾತ ಹಾಡು “ಐ ಆಮ್‌ ಇನ್ವಿನ್ಸಿಬಲ್‌, ಐ ಆಮ್‌ ಸೋ ಕಾನ್ಫಿಡೆಂಟ್‌, ಯಾಹ್‌, ಐ ಯಾಮ್‌ ಅನ್‌ಸ್ಟಾಪೇಬಲ್‌” ಹಾಡು ಪೋಸ್ಟ್‌ ಮಾಡಿದೆ.

ಕಾಂಗ್ರೆಸ್‌ ಪಕ್ಷ ಸದ್ಯ 115 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ ಬಿಜೆಪಿ 73 ಹಾಗೂ ಜೆಡಿ(ಎಸ್) 20 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಕಾಂಗ್ರೆಸ್‌ ಖಂಡಿತಾ ಗೆಲುವು ಸಾಧಿಸಲಿದೆ, ಆತ್ಮವಿಶ್ವಾಸದಿಂದಿದೆ, ನಮ್ಮನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಅರ್ಥವನ್ನು ಈ ಹಾಡು ನೀಡುತ್ತದೆ.

Similar News