×
Ad

ಬಾರಾಮುಲ್ಲಾ: ಒಳನುಸುಳುವ ಉಗ್ರರ ಯತ್ನ ವಿಫಲ‌

Update: 2023-05-13 23:51 IST

ಶ್ರೀನಗರ, ಮೇ 13: ಉತ್ತರ ಕಾಶ್ಮೀರದ ಬಾರಾಮುಲ್ಲಾದಲ್ಲಿ ಗಡಿ ನಿಯಂತ್ರಣ ರೇಖೆಯ ಸಮೀಪ ಗಡಿ ನುಸುಳಿ ಭಾರತಕ್ಕೆ ಬರುವ ಉಗ್ರರ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ಸೇನೆ ಶನಿವಾರ ತಿಳಿಸಿದೆ. ‘‘ಬಾರಾಮುಲ್ಲಾದಲ್ಲಿ ಭಯೋತ್ಪಾದಕರ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಲಾಗಿದೆ. ನಮ್ಮ ಸೈನಿಕರು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಕಾಳಗ ನಡೆದಿದೆ’’ ಎಂದು ಸೇನೆ ಹೇಳಿದೆ.

‘‘ಸಾವು-ನೋವಿನ ಬಗ್ಗೆ ವರದಿಗಳು ಬಂದಿಲ್ಲ. ಯಾರಾದರೂ ಭಯೋತ್ಪಾದಕರು ಒಳ ನುಸುಳುವಲ್ಲಿ ಯಶಸ್ವಿಯಾಗಿದ್ದರೆ, ಅವರನ್ನು ಪತ್ತೆಹಚ್ಚಲು ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ’’ ಎಂದು ಅಧಿಕಾರಿಗಳು ತಿಳಿಸಿದರು. ಒಳನುಸುಳುವಿಕೆ ನಡೆದ ಸ್ಥಳದಲ್ಲಿ ಪಾಕಿಸ್ತಾನಿ ಕಡೆಯಿಂದ ಕ್ವಾಡ್ಕಾಪ್ಟರ್ ಒಂದನ್ನು ಹಾರಿಸಲು ಪ್ರಯತ್ನಿಸಲಾಯಿತು ಎಂದು ಸೇನೆ ತಿಳಿಸಿತು. ‘‘ಭಾರತೀಯ ಸೈನಿಕರು ಅದರ ಮೇಲೆ ಗುಂಡು ಹಾರಿಸಿದ ತಕ್ಷಣ ಅದು ಹಿಂದಕ್ಕೆ ಹೋಯಿತು’’ ಎಂದಿತು.
ಸಮೀಪದ ದಟ್ಟ ಕಾಡಿನಲ್ಲಿ ಬೃಹತ್ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

Similar News