ಬೋಟಿನಿಂದ ಸಮುದ್ರಕ್ಕೆ ಬಿದ್ದು ಮೀನುಗಾರ ನಾಪತ್ತೆ

Update: 2023-05-15 15:58 GMT

ಮಲ್ಪೆ, ಮೇ 15: ಸಮುದ್ರದ ಮಧ್ಯೆ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಮೀನುಗಾರರೊಬ್ಬ ಬೋಟಿನಿಂದ ಆಯಾ ತಪ್ಪಿ ನೀರಿಗೆ ಬಿದ್ದು ನಾಪತ್ತೆಯಾಗಿ ರುವ ಘಟನೆ ಮೇ 11ರಂದು ರಾತ್ರಿ ವೇಳೆ ನಡೆದಿದೆ.

ಮೃತರನ್ನು ಒಡಿಸ್ಸಾ ಮೂಲದ ಮಜಾಯ ಮಜಿ(31) ಎಂದು ಗುರುತಿಸ ಲಾಗಿದೆ. ಇವರು ಮೇ 8ರಂದು ನಾಗೇಶ ಶ್ರೀಯಾನ್ ಎಂಬವರ ದಯಾಲಕ್ಷ್ಮೀ ಮೀನುಗಾರಿಕೆ ಬೋಟಿನಲ್ಲಿ ಮಲ್ಪೆಯಿಂದ ಸಮುದ್ರಕ್ಕೆ ಮೀನುಗಾರಿಕೆ ತೆರಳಿದ್ದರು. ಈ ವೇಳೆ 60 ನಾಟಿಕಲ್ ಮೈಲಿ ದೂರ ಸಮುದ್ರದಲ್ಲಿ ಮಜಾಯ ಮಜಿ ಬೋಟಿನಿಂದ ಆಯ ತಪ್ಪಿ ಸಮುದ್ರಕ್ಕೆ ಬಿದ್ದು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿ ದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News