ಬಿಜೆಪಿಗೆ ಅವಕಾಶ ನೀಡಿದರೆ ಕೇರಳ ಸುಟ್ಟು ಹೋಗಬಹುದು: ಖ್ಯಾತ ಲೇಖಕಿ ಅರುಂಧತಿ ರಾಯ್

"ಕರ್ನಾಟಕ ಚುನಾವಣಾ ಫಲಿತಾಂಶ ಘೋಷಣೆ ಬಳಿಕ ಖುಷಿಯಿಂದ ನಿದ್ದೆ ಬಂದಿರಲಿಲ್ಲ"

Update: 2023-05-16 10:59 GMT

ಕೊಚ್ಚಿ: ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಘೋಷಣೆಯಾದ ನಂತರ ರಾತ್ರಿ ತಮಗೆ ನಿದ್ದೆ ಬಂದಿರಲಿಲ್ಲ ಎಂದು ಹೇಳಿರುವ ಖ್ಯಾತ ಲೇಖಕಿ ಅರುಂಧತಿ ರಾಯ್, “ನಾನು ಬಹಳ ಖುಷಿ ಪಟ್ಟೆ,, ಏಕೆಂದರೆ ಎದ್ದು ನಿಂತಿರುವ ಏಕೈಕ ಸ್ಥಳ ಕೇರಳ ಮಾತ್ರ ಆಗಿರಬಾರದು,” ಎಂದು  ಫೋರ್ಟ್ ಕೊಚ್ಚಿಯಲ್ಲಿ ರವಿವಾರ ನಡೆದ ಯುವ ಸಾಹಿತ್ಯೋತ್ಸವ “ಯುವಧಾರಾ”ದಲ್ಲಿ ಮಾತನಾಡುತ್ತಾ ರಾಯ್ ಹೇಳಿದರು.

ಕೇರಳ ಮೂಲದವರಾಗಿರುವ ಅರುಂಧತಿ ರಾಯ್, ತಮ್ಮ ಮಾತು ಮುಂದುವರಿಸುತ್ತಾ ಕೇರಳವು ಬಿಜೆಪಿಯನ್ನು ದೂರ ಇರಿಸಬೇಕು ಎಂದರು. “ನಮಗೊಂದು ಅವಕಾಶ ನೀಡಿ” ಎಂದು ಕಟ್ಟಿಗೆಯನ್ನು ಕೇಳುವ ಹೊತ್ತಿಸಿದ ಬೆಂಕಿ ಕಡ್ಡಿಯಂತೆ ಅದಾಗಿದೆ. ಅವರಿಗೆ ಒಂದು ಅವಕಾಶ ನೀಡಿದರೆ ಕೇರಳ ಸುಟ್ಟು ಹೋಗಲಿದೆ,”  ಎಂದು ರಾಯ್ ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯ ಕೇರಳ ಭೇಟಿ ವೇಳೆ ಚರ್ಚ್ ಪ್ರಮುಖರು ಅವರನ್ನು ಭೇಟಿಯಾಗುತ್ತಿರುವುದನ್ನು ನೋಡಿ ತಮಗೆ ನಿರಾಸೆಯಾಗಿತ್ತು ಎಂದು ಹೇಳಿದ ಅರುಂಧತಿ ರಾಯ್ “ಜನರು ಹೂಮಳೆಗರೆಯುತ್ತಿರುವುದನ್ನು ನೋಡಿ ಕಳವಳವಾಯಿತು. ಅದಕ್ಕಿಂತಲೂ ಹೆಚ್ಚು ಕ್ರೈಸ್ತ ಚರ್ಚಿನ ಕೆಲವರು ಹೋಗಿ ಅವರನ್ನು ಭೇಟಿಯಾಗುವುದನ್ನು ನೋಡಿ ಆತಂಕವಾಯಿತು. ಏನು ನಡೆಯುತ್ತಿದೆ ಎಂದು ತಿಳಿಯದ ಹೊರತು ಇದು ಹೇಗೆ ನಡೆಯಲು ಸಾಧ್ಯ? ಮಣಿಪುರದಲ್ಲೇನಾಗುತ್ತಿದೆ ಗೊತ್ತಿದೆಯೇ? ಛತ್ತೀಸಗಢದಲ್ಲೇನಾಗುತ್ತಿದೆ ತಿಳಿದಿದೆಯೇ? ಜಾರ್ಖಂಡ್ನಲ್ಲಿ ಕ್ರೈಸ್ತರೊಂದಿಗೆ ಏನು ನಡೆಯುತ್ತಿದೆ ಗೊತ್ತೇ. ಕಳೆದೆರಡು ವರ್ಷಗಳಲ್ಲಿ ಚರ್ಚುಗಳ ಮೇಲೆ 200 ದಾಳಿಗಳು ನಡೆದಿವೆ ಎಂದು ಗೊತ್ತೇ? ಇಂತಹ ಜನರೊಂದಿಗೆ ಹೇಗಾದರೂ ಮಾತನಾಡಬಲ್ಲಿರಿ,” ಎಂದು ಅವರು ಪ್ರಶ್ನಿಸಿದರು.

2021ರಲ್ಲಿ ಕೇರಳ ವಿಧಾನಸಭಾ ಫಲಿತಾಂಶದ ಬಳಿಕ ತಮ್ಮ ನಾದಿನಿ ತಮಗೆ ಕಳುಹಿಸಿದ್ದ ಸಂದೇಶ ತಮ್ಮ ಅಚ್ಚುಮೆಚ್ಚಿನದು. ಸಂದೇಶ ಏನೆಂದರೆ ಬಿಜೆಪಿಯು 'ಆನ ಮೊಟ್ಟ' (ಆನೆಯ ಮೊಟ್ಟೆ) ಗೆ ಸಮನಾಗಿದೆ ಎಂದು. ಆ ಸಂದರ್ಭ ಕೇಸರಿ ಪಕ್ಷ ಒಂದೇ ಒಂದು ಸೀಟು ಗೆಲ್ಲದೇ ಇದ್ದುದನ್ನು ಉಲ್ಲೇಖಿಸಿ ಹೀಗೆ ಹೇಳಲಾಗಿತ್ತು. 2016 ಚುನಾವಣೆಯಲ್ಲಿ ತಿರುವನಂತಪುರಂನ ನೆಮೊಮ್ ಕ್ಷೇತ್ರದಲ್ಲಿ ಬಿಜೆಪಿಯ ಒ ರಾಜಗೋಪಾಲ್ ಗೆದ್ದು ಇತಿಹಾಸ ನಿರ್ಮಿಸಿದ್ದರು.

Similar News