ಕಾಪು : ಕಾರುಗಳ ಮಧ್ಯೆ ಅಪಘಾತ; ಓರ್ವ ಮೃತ್ಯು

Update: 2023-05-16 16:08 GMT

ಕಾಪು: ರಾಷ್ಟ್ರೀಯ ಹೆದ್ದಾರಿ ಪಾಂಗಾಳದಲ್ಲಿ ಎರಡು ಕಾರುಗಳ ಮಧ್ಯೆ ನಡೆದ ಅಪಘಾತದಲ್ಲಿ ಓರ್ವ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.

ಮೃತರನ್ನು ಕಾರಿನಲ್ಲಿದ್ದ ಮುನ್ನಾ ಯಾನೆ ಇಮ್ತಿಯಾಝ್(45) ಎಂದು ಗುರುತಿಸಲಾಗಿದೆ.

ಇವರು ಕೊಪ್ಪ ಮೂಲದವರಾಗಿದ್ದು, ಕಾಪು ಸಮೀಪದ ಚಂದ್ರನಗರಕ್ಕೆ ಬಂದಿದ್ದರು. ನ್ಯಾನೋ ಕಾರಿನಲ್ಲಿ ಉಡಪಿಯಿಂದ ಕಾಪುವಿನತ್ತ ಪ್ರಯಾಣಿಸುತಿದ್ದಾಗ ಉಡುಪಿ ಕಡೆಯಿಂದ ಬರುತಿದ್ದ ಡಸ್ಟರ್ ಕಾರು ಮಧ್ಯೆ ಅಪಘಾತ ಸಂಭವಿಸಿದೆ. ಢಿಕ್ಕಿ ಹೊಡೆದ ರಭಸಕ್ಕೆ ಎರಡೂ ಕಾರುಗಳ ನಜ್ಜುಗುಜ್ಜಾಗಿದ್ದು, ನ್ಯಾನೋ ಕಾರಿನಲ್ಲಿದ್ದ ನಾಲ್ವರಿಗೆ ಗಂಭೀರ ಗಾಯವಾಗಿದೆ. ಕೂಡಲೇ ಅವರನ್ನು ಉಡುಪಿ ಆಸ್ಪತ್ರೆಗೆ ದಾಖಲಿಸಲಾಯಿತು. ಡಸ್ಟರ್ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Similar News