ಹೆಚ್ಚಿನ ವಿಚ್ಛೇದನ ಪ್ರಕರಣಗಳು ಪ್ರೇಮ ವಿವಾಹಗಳಿಂದ ಉಂಟಾಗುತ್ತಿವೆ: ಸುಪ್ರೀಂ ಕೋರ್ಟ್‌

Update: 2023-05-17 13:15 GMT

ಹೊಸದಿಲ್ಲಿ: ಪ್ರೇಮ ವಿವಾಹಗಳಿಂದಾಗಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಸುಪ್ರೀಂ ಕೋರ್ಟ್‌ ಇಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ವೈವಾಹಿಕ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ವರ್ಗಾಗಣೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೈಗೆತ್ತಿಕೊಂಡ ಸಂದರ್ಭ ನ್ಯಾಯಮೂರ್ತಿಗಳಾದ ಬಿ ಆರ್‌ ಗವಾಯಿ ಮತ್ತು ಸಂಜಯ್‌ ಕರೋಲ್‌ ಅವರ ಪೀಠ ಮೇಲಿನಂತೆ ಹೇಳಿದೆ. ಈ ನಿರ್ದಿಷ್ಟ ಪ್ರಕರಣದ ದಂಪತಿಗಳು ಪ್ರೇಮ ವಿವಾಹವಾಗಿದ್ದರು ಎಂಬ ಅಂಶವನ್ನು ವಕೀಲರು ಹೇಳಿದಾಗ ಈ ಅಭಿಪ್ರಾಯ ವ್ಯಕ್ತವಾಯಿತು.

“ಹೆಚ್ಚಿನ ವಿಚ್ಛೇದನ ಪ್ರಕರಣಗಳು ಪ್ರೇಮ ವಿವಾಹಗಳಿಂದಲೇ ಉದ್ಭವವಾಗುತ್ತವೆ,” ಎಂದು ಜಸ್ಟಿಸ್‌ ಗವಾಯಿ ಹೇಳಿದರು.

ಈ ಪ್ರಕರಣದಲ್ಲಿ ನ್ಯಾಯಾಲಯ ರಾಜಿ ಪಂಚಾತಿಕೆ ಶಿಫಾರಸು ಮಾಡಿದರೂ ಪತಿ ಒಪ್ಪಲಿಲ್ಲ. ಆದರೆ  ಇತ್ತೀಚಿನ ಒಂದು ತೀರ್ಪಿನ ಆಧಾರದಲ್ಲಿ, ಆತನ ಒಪ್ಪಿಗೆಯಿಲ್ಲದೆಯೇ ವಿಚ್ಛೇದನ ಮಂಜೂರುಗೊಳಿಸಬಹುದು ಎಂದು ನ್ಯಾಯಾಲಯ ಹೇಳಿತು.

ನಂತರ ಮತ್ತೆ ರಾಜಿ ಪಂಚಾತಿಕೆಗೆ ನ್ಯಾಯಾಲಯ ಶಿಫಾರಸು ಮಾಡಿದೆ.

Similar News