ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ದೂರದೃಷ್ಟಿ ಯೋಜನೆ ತಯಾರಿ ತರಬೇತಿ

Update: 2023-05-18 12:46 GMT

ಹೆಬ್ರಿ: ಗ್ರಾಮ ಪಂಚಾಯತ್ ಮಟ್ಟದಲ್ಲಿ ಅಭಿವೃದ್ಧಿ ಸಾಧಿಸಲು ದೂರದೃಷ್ಟಿ ಯೋಜನೆ ಅತ್ಯಂತ ಮುಖ್ಯ. ಆದರೆ ಈ ಯೋಜನೆ ತಯಾರಿಯಲ್ಲಿ ಮಹಿಳೆಯರ ಸಹಭಾಗಿತ್ವ ಇಲ್ಲದಿದ್ದರೆ ಯೋಜನೆ ಯಶಸ್ವಿಯಾಗಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ದೂರದೃಷ್ಟಿ ಯೋಜನೆ ತಯಾರಿಯಲ್ಲಿ ಯಾವ ಯಾವ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಬೇಕೆಂಬ ಮಾಹಿತಿ ನೀಡುವುದು ಅತ್ಯವಶ್ಯಕ ಎಂದು ಉಡುಪಿ ಜಿಪಂ ಯೋಜನಾ ನಿರ್ದೇಶಕ ನವೀನ್ ಕುಮಾರ್ ಎಚ್.ಡಿ. ಹೇಳಿದ್ದಾರೆ.  

ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ರಾಜ್ಯ ಜೀವನೋಪಾಯ ಸಂವರ್ಧನಾ ಸಂಸ್ಥೆ - ಸಂಜೀವಿನಿ, ಉಡುಪಿ ಜಿಪಂ, ಹೆಬ್ರಿ ತಾಪಂ, ವರಂಗ ಗ್ರಾಪಂ, ತ್ರಿವೇಣಿ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ೪ ದಿನಗಳ ಮಾದರಿ ಒಕ್ಕೂಟಗಳ ದೂರದೃಷ್ಟಿ ಕುರಿತು ತರಬೇತುದಾರರಾಗಿ ಪ್ರಾತ್ಯಕ್ಷಿಕೆ ತರಬೇತಿಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕಾರ್ಯಕ್ರಮದಲ್ಲಿ ಹೆಬ್ರಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕೆ.ಜಿ., ಪ್ರಮೀಳಾ ಹರೀಶ್, ಅಧ್ಯಕ್ಷರು, ಹೆಬ್ಬೇರಿ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ ಹಾಗೂ ತ್ರಿವೇಣಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟ, ವರಂಗ, ಶಿವರಾಮ್, ರಾಜ್ಯ ಸಂಪನ್ಮೂಲ ವ್ಯಕ್ತಿ, ಸಂಜೀವಿನಿ, ಸುಖೇತಾ, ವಲಯ ಮೇಲ್ವಿಚಾರಕರು ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಸ್ವಾಗತಿಸಿದರು. ಉಡುಪಿ ಜಿಪಂ ಎನ್‌ಆರ್‌ಎಲ್‌ಎಂನ ಜಿಲ್ಲಾ ವ್ಯವಸ್ಥಾಪಕ ನವ್ಯಾ ಹರೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಎನ್‌ಆರ್‌ಎಲ್‌ಎಂನ ಯುವ ವೃತ್ತಿಪರರು ಜಯ ಮಾಲಾ ವಂದಿಸಿದರು. ಸುಜಾತ, ಮುಖ್ಯ ಪುಸ್ತಕ ಬರಹಗಾರರು ತ್ರಿವೇಣಿ ವರಂಗ ಕಾರ್ಯ ಕ್ರಮ ನಿರೂಪಿಸಿದರು.

Similar News