×
Ad

ಖ್ಯಾತ ಜಪಾನಿ ಕಬುಕಿ ನಟ, ಪೋಷಕರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

Update: 2023-05-18 18:56 IST

ಟೋಕಿಯೋ: ಜಪಾನಿನ ಜನಪ್ರಿಯ ಕಬುಕಿ ನಟನೊಬ್ಬ ತನ್ನ ಪೋಷಕರೊಂದಿಗೆ ಕೋಣೆಯೊಂದರಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಗುರುವಾರ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಎನ್ಮೊಸುಕೆ ಇಚಿಕಾವಾ (47) ತಮ್ಮ ಟೋಕಿಯೋದಲ್ಲಿರುವ ಮನೆಯಲ್ಲಿನ ಕೋಣೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು ಎಂದು ತನ್ನ ಪ್ರತಿನಿಧಿಯನ್ನು ಉಲ್ಲೇಖಿಸಿ ಜೀಜಿ ಪತ್ರಿಕಾ ಸಂಸ್ಥೆ ಹಾಗೂ ಇನ್ನಿತರ ಸ್ಥಳೀಯ ಮಾಧ್ಯಮಗಳು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿವೆ.

ರಕ್ಷಣಾ ಕಾರ್ಯಕರ್ತರು ಕಬುಕಿ ನಟರೇ ಅಗಿದ್ದ ಅವರ 76 ವರ್ಷದ ತಂದೆ ಹಾಗೂ 75 ವರ್ಷದ ಅವರ ತಾಯಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡಿದ್ದಾರೆ. ನಂತರ ಅವರು ಮೃತಪಟ್ಟಿದ್ದಾರೆ ಎಂದು ದೃಢಪಡಿಸಲಾಯಿತು ಎಂದು ಜೀಜಿ ಹಾಗೂ ಎನ್‌ಎಚ್‌ಕೆ ಸಾರ್ವಜನಿಕ ಪ್ರಸಾರ ಸಂಸ್ಥೆ ವರದಿ ಮಾಡಿವೆ.

ಪೊಲೀಸರು ಈ ಕುರಿತು ತನಿಖೆ ಕೈಗೊಂಡಿದ್ದು, ಇಚಿಕಾವಾರ ಆತ್ಮಹತ್ಯೆ ಪತ್ರದಂತೆ ಕಂಡು ಬಂದಿರುವ ಪತ್ರವೊಂದು ಅವರ ಮನೆಯಲ್ಲಿ ಪತ್ತೆಯಾಗಿದೆ ಎಂದು ಜೀಜಿ ವರದಿ ಮಾಡಿದೆ.

70 ವರ್ಷ ವಯೋಮಾನದ ಪುರುಷ ಹಾಗೂ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂಬ ಸಂಗತಿಯನ್ನು ದೃಢಪಡಿಸಿರುವ ಹೆಸರೇಳಲಿಚ್ಛಿಸದ ಪೊಲೀಸ್ ವಕ್ತಾರರೊಬ್ಬರು, ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

Similar News