×
Ad

ಗೆಹ್ಲೋಟ್, ಪೈಲಟ್ ಬೆಂಬಲಿಗರ ನಡುವೆ ಘರ್ಷಣೆ

Update: 2023-05-18 22:03 IST

ಜೈಪುರ, ಮೇ 18: ರಾಜಸ್ಥಾನದ ಅಜ್ಮೀರ್‌ ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಅವರ ಬದ್ಧ ವೈರಿ ಹಾಗೂ ಪಕ್ಷದ ನಾಯಕ ಸಚಿನ್ ಪೈಲಟ್ ರ ಬೆಂಬಲಿಗರ ನಡುವೆ ಗುರುವಾರ ಘರ್ಷಣೆ ನಡೆದಿದೆ.

ಆಸನ ವ್ಯವಸ್ಥೆಯ ವಿಷಯದಲ್ಲಿ ಇಬ್ಬರು ನಾಯಕರ ಬೆಂಬಲಿಗರು ಜಗಳವಾಡಿದರು ಹಾಗೂ ಬಳಿಕ ಅದು ಹೊಡೆದಾಟದವರೆಗೆ ಮುಂದುವರಿಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿದೆಯೆನ್ನಲಾದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ಪೈಲಟ್, ಗೆಹ್ಲೋಟ್ ಸರಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

Similar News