ಪ್ರತಿ ಲೋಕಸಭಾ ಕ್ಷೇತ್ರದಲ್ಲಿ 200 ಮಹಿಳೆಯರಿಗೆ ತರಬೇತಿ ನೀಡಲು ಬಿಜೆಪಿಯಿಂದ ‘‘ಕಮಲ್ ಮಿತ್ರಾ’’ ಕಾರ್ಯಕ್ರಮ

Update: 2023-05-18 17:29 GMT

ಹೊಸದಿಲ್ಲಿ, ಮೇ 18: ಪ್ರತಿ ಲೋಕಸಭಾ ಕ್ಷೇತ್ರದಲ್ಲಿ 200 ಮಹಿಳೆಯರಿಗೆ ತರಬೇತಿ ನೀಡುವ ‘‘ಕಮಲ್ ಮಿತ್ರಾ’’ ತರಬೇತಿ ಕಾರ್ಯಕ್ರಮವನ್ನು ಬಿಜೆಪಿಯ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಶುಕ್ರವಾರ ಉದ್ಘಾಟಿಸಲಿದ್ದಾರೆ.

ಈ ಬಗ್ಗೆ ಮಾತನಾಡಿದ ಮಹಿಳಾ ಮೋರ್ಚಾದ ರಾಷ್ಟ್ರಾಧ್ಯಕ್ಷೆ ವನತಿ ಶ್ರೀನಿವಾಸ್, ‘‘ಪ್ರಧಾನಿ ನರೇಂದ್ರ ಮೋದಿ ಅನುಷ್ಠಾನಗೊಳಿಸಿದ ಯೋಜನೆಗಳ ಕುರಿತು ಮಹಿಳಾ ಕಾರ್ಯಕರ್ತರನ್ನು ತರಬೇತುಗೊಳಿಸುವ ವಿಶಿಷ್ಟ ತರಬೇತು ಕಾರ್ಯಕ್ರಮ ಕಮಲ್ ಮಿತ್ರಾ’’ ಎಂದಿದ್ದಾರೆ. 

ಪ್ರತಿ ಲೋಕಸಭಾ ಕ್ಷೇತ್ರದಲ್ಲಿ 200 ಪದಾಧಿಕಾರಿಗಳು ಹಾಗೂ ಮಹಿಳಾ ಮೋರ್ಚಾದ ಮಹಿಳಾ ಕಾರ್ಯಕರ್ತರಿಗೆ ತರಬೇತು ನೀಡುವ ಮೂಲಕ 1 ಲಕ್ಷ ‘‘ಕಮಲ್ ಮಿತ್ರಾ’’ ಸಹೋದರಿಯನ್ನು ಸಿದ್ಧಗೊಳಿಸುವ ಗುರಿಯನ್ನು ಈ ತರಬೇತು ಕಾರ್ಯಕ್ರಮ ಹೊಂದಿದೆ ಎಂದು ಅವರು ತಿಳಿಸಿದ್ದಾರೆ. 

ಉಜ್ವಲ ಯೋಜನಾ, ಸುಕನ್ಯಾ ಸಮೃದ್ಧಿ ಯೋಜನಾ, ಪ್ರಧಾನ ಮಂತ್ರಿ ಆವಾಸ್ ಯೋಜನಾ, ಮಾತೃತ್ವ ವಂದನ ಯೋಜನಾ ಮೊದಲಾದ 15 ಪ್ರಮುಖ ಸರಕಾರಿ ಯೋಜನೆಗಳ ಕುರಿತು ತರಬೇತಿ ನೀಡಲು ಹಿಂದಿ, ಇಂಗ್ಲೀಷ್ ಅಲ್ಲದೆ ತಮಿಳು, ತೆಲುಗು, ಮಲೆಯಾಳಂ, ಕನ್ನಡ, ಬಂಗಾಳಿ, ಅಸ್ಸಾಮಿ, ಗುಜರಾತಿ ಹಾಗೂ ಮಲೆಯಾಳಿ ಭಾಷೆಯಲ್ಲಿ ಸಿದ್ಧತೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

Similar News