×
Ad

‘ಆರಾ ಮೆಗಾ ಆರ್ಟ್ ಶೋ’ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ

Update: 2023-05-22 18:39 IST

ಉಡುಪಿ, ಮೇ 22: ಆರಾ ಚಿತ್ರಕಲಾ ಶಾಲೆ ಮತ್ತು ಆರ್ಟ್ ಗ್ಯಾಲರಿ ವತಿಯಿಂದ ಆರಾ ಮೆಗಾ ಆರ್ಟ್ ಶೋ ಕಲಾಕೃತಿಗಳ ಪ್ರದರ್ಶನದ ಉದ್ಘಾಟನೆ ಕುಂಜಿಬೆಟ್ಟು ಎವಿಎ ಕಾಂಪ್ಲೆಕ್ಸ್‌ನ ಮೊದಲ ಮಹಡಿಯಲ್ಲಿರುವ ಆರ್ಟ್ ಗ್ಯಾಲರಿ ಯಲ್ಲಿ ರವಿವಾರ ನಡೆಯಿತು.

ಪ್ರದರ್ಶನವನ್ನು ರೋಟರಿ ಮಣಿಪಾಲ ಅಧ್ಯಕ್ಷೆ ರೇಣು ಜಯರಾಮ್ ಮತ್ತು ಅಜ್ಜರಕಾಡು ಜಿ.ಶಂಕರ್ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಕಲಾವಿದ ಶೈಲೇಶ್ ಕೋಟ್ಯಾನ್ ಅವರನ್ನು ಸನ್ಮಾನಿಸ ಲಾಯಿತು. ಕಲಾವಿದರಾದ ರಿತಿಕ ಉದಯ್, ಪ್ರದ್ನಯಾ ವಲ್ವಳ್ಕರ್ ಮತ್ತು ಪುಲಾಸ್ತಯ ಉಪಸ್ಥಿತರಿದ್ದರು.

ಕಲಾವಿದೆ ಲಕ್ಷೀ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ನೇಹಾ ಹರೀಶ್, ಪೂರ್ಣ ಪ್ರಭು ಮತ್ತು ಪೂರ್ವಿ ಐತಾಳ್ ಗಣ್ಯ ಪರಿಚಯ ಮಾಡಿದರು. ಶ್ರೀರಕ್ಷಾ ಕರ್ಕೇರ ವಂದಿಸಿದರು.

ಎಂಟು ವಿದ್ಯಾರ್ಥಿಗಳ ತುಳುನಾಡಿನ ಸಂಸ್ಕೃತಿ, ಆಚಾರ ವಿಚಾರ, ಪರಿಸರ, ದೇವಾನುದೇವತೆಗಳ ಸೇರಿದಂತೆ ಸುಮಾರು 50ಕ್ಕೂ ಅಧಿಕ ವಿಶಿಷ್ಟ ಕಲಾಕೃತಿಗಳು ಇಲ್ಲಿ ಪ್ರದರ್ಶನಗೊಳ್ಳುತ್ತಿವೆ. ಚಿತ್ರಕಲಾ ಪ್ರದರ್ಶನವು ಮೇ23ರವರೆಗೆ ನಡೆಯಲಿದೆ.

Similar News