ಮೇ 23 - 24ರಂದು ಉಡುಪಿ ಜಿಲ್ಲೆಯಾದ್ಯಂತ ವಿದ್ಯುತ್ ವ್ಯತ್ಯಯ

Update: 2023-05-22 14:03 GMT

ಉಡುಪಿ, ಮೇ 22: ಜಿಲ್ಲಾ ವ್ಯಾಪ್ತಿಯಲ್ಲಿ ನಿರ್ವಹಣಾ ಕೆಲಸಗಳ ಕಾರಣದಿಂದ ಮೇ 23 ಹಾಗೂ 24ರಂದು ಈ ಕೆಳಕಂಡ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ. 

33/11ಕೆವಿ ಕುಂಜಿಬೆಟ್ಟು ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆವಿ ಉಡುಪಿ-3 ಮತ್ತು 110/33/11 ಕೆವಿ ನಿಟ್ಟೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆವಿ ಬನ್ನಂಜೆ ಫೀಡರ್ ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಉಡುಪಿ ನಗರ ಪ್ರದೇಶಗಳಾದ ಪಿ.ಪಿ.ಸಿ ಕಾಲೇಜು, ಫಿಶ್ ಮಾರ್ಕೆಟ್ ರೋಡ್, ಕೋರ್ಟ್ ರಸ್ತೆ, ಮಾರುತಿ ವಿಥೀಕಾ, ಪಿ.ಡಬ್ಲ್ಯೂ.ಡಿ ಆಫೀಸ್, ತೆಂಕಪೇಟೆ, ಕೆ.ಎಂ.ಮಾರ್ಗ, ಕನಕದಾಸ ರಸ್ತೆ, ಅಜ್ಜರಕಾಡು, ಬನ್ನಂಜೆ, ಕಾಡಬೆಟ್ಟು, ವಿದ್ಯಾರಣ್ಯ ಮಾರ್ಗ, ಬ್ರಹ್ಮಗಿರಿ, ತಾಲೂಕು ಪಂಚಾಯತ್, ಸಿಟಿ ಬಸ್ ನಿಲ್ದಾಣ, ಸರ್ವಿಸ್ ಬಸ್ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇ 23ರಂದು ಬೆಳಗ್ಗೆ 9:30ರಿಂದ ಸಂಜೆ 5:30ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

110/33/11ಕೆವಿ ಹಿರಿಯಡ್ಕ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11ಕೆವಿ ಪೆರ್ಡೂರು ಫೀಡರ್ ಮಾರ್ಗದಲ್ಲಿ ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಪುತ್ತಿಗೆ, ಪಕ್ಕಾಲು, ಪೆರ್ಡೂರು ಪೇಟೆ, ಮುತ್ತೂರ್ಮೆ, ಕುಕ್ಕೆಹಳ್ಳಿ, ಪಾಡಿಗಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇ 23ರಂದು ಬೆಳಗ್ಗೆ 9:00ರಿಂದ ಸಂಜೆ 5:00ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

110/33/11ಕೆವಿ ವಿದ್ಯುತ್ ನೋಡಲ್ ಕೇಂದ್ರ ಮಣಿಪಾಲದಡಿಯಲ್ಲಿ ಬರುವ 110/11ಕೆವಿ ಬ್ರಹ್ಮಾವರ ವಿದ್ಯುತ್ ಕೇಂದ್ರದಲ್ಲಿ 110/11ಕೆವಿ ಪರಿವರ್ತಕ-1 ಮತ್ತು ಪರಿವರ್ತಕ-2ರಲ್ಲಿ ಪಾಲನೆ ಮತ್ತು ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಈ ಉಪ ವಿದ್ಯುತ್ ಕೇಂದ್ರ ದಿಂದ ಹೊರಡುವ ಎಲ್ಲಾ 11 ಕೆವಿ ಫೀಡರಿನಲ್ಲಿ ಬ್ರಹ್ಮಾವರ, ಅಗ್ರಹಾರ, ನಂದಿಗುಡ್ಡೆ, ಕೊಳಂಬೆ, ಮಟಪಾಡಿ, ಚಾಂತಾರು, ಹಂದಾಡಿ, ಇಂದಿರಾನಗರ, ಬೇಳೂರುಜೆಡ್ಡು, ಬ್ರಹ್ಮಾವರ, ರಥಬೀದಿ, ಹೈರಾಬೆಟ್ಟು, ಜಾತಬೆಟ್ಟು, ಉಗ್ಗೇಲ್‌ಬೆಟ್ಟು, ಲಕ್ಷ್ಮೀ ನಗರ, ಅಮ್ಮುಂಜೆ, ಕೊಳಲಗಿರಿ, ಕುಮ್ರಗೋಡು, ವಾರಂಬಳ್ಳಿ, ಹೇರೂರು, ಮುಂಡ್ಕಿನಜೆಡ್ಡು, ಕನ್ನಾರು, ಪೇತ್ರಿ, ಮಡಿ, ಕೃಷ್ಣಮಿಲ್ಕ್, ಸುಪ್ರೀಂ ಫೀಡ್ಸ್, ರುಡ್‌ಸೆಟ್, ಹಾವಂಜೆ, ಚೇರ್ಕಾಡಿ, ಮಂದಾರ್ತಿ, ಕಾಡೂರು, ತಂತ್ರಾಡಿ, ಹೆಗ್ಗುಂಜೆ, ನಡೂರು, ಹೆಬ್ಬಾಡಿ, ಮೊಗವೀರಪೇಟೆ, ಕೊಕ್ಕರ್ಣೆ, ಕೆಂಜೂರು, ಶೀರೂರು, ಹಿಲಿಯಾಣ, ನಾಲ್ಕೂರು, ಮುದ್ದೂರು, ನಯಂಪಳ್ಳಿ, ಉಪ್ಪಿನಕೋಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇ 23ರಂದು ಬೆಳಗ್ಗೆ 10ರಿಂದ ಸಂಜೆ 4:30 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. 

33/11ಕೆವಿ ಶಿರ್ವ ಎಂ.ಯು.ಎಸ್.ಎಸ್. ಉಪಕೇಂದ್ರದಿಂದ ಹೊರಡುವ 11ಕೆವಿ ಬಂಟಕಲ್ಲು ಮತ್ತು ಶಂಕರಪುರ ಫೀಡರ್ ಮಾರ್ಗದಲ್ಲಿ ಪ್ರೀ ಮಾನ್ಸೂನ್ (ಟ್ರೀಕಟ್ಟಿಂಗ್) ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬಂಟಕಲ್ಲು, ಪಾಂಗಳ, ಮೂಡಬೆಟ್ಟು, ಉಳಿಯಾರಗೋಳಿ, ಶಂಕರಪುರ, ಕುಂಜಾರುಗಿರಿ, ಸಾಲ್ಮರ, ಕುರ್ಕಾಲು, ಇನ್ನಂಜೆ, ಪಡುಬೆಳ್ಳೆ, ಪಾಜೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇ 23ರಂದು ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

110/11 ಕೆವಿ ಹಾಲಾಡಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಬಿದ್ಕಲ್ಕಟ್ಟೆ ಮತ್ತು ಆವರ್ಸೆ ಮಾರ್ಗಗಳಲ್ಲಿ ಪಾಲನಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬಿದ್ಕಲ್ಕಟ್ಟೆ, ಕಕ್ಕುಂಜೆ, ಹಾಲಾಡಿ-76, ಹೆಸ್ಕತ್ತೂರು, ಹಾಲಾಡಿ-28, ರಟ್ಟಾಡಿ,  ಅಮಾಸೆಬೈಲು, ಮಚ್ಚಟ್ಟು, ಹಳ್ಳಾಡಿ- ಹರ್ಕಾಡಿ, ಮೊಳಹಳ್ಳಿ, ಹಾರ್ದಳ್ಳಿ-ಮಂಡಳ್ಳಿ, ಶಂಕರನಾರಾಯಣ ಮತ್ತು ಯಡಾಡಿ-ಮತ್ಯಾಡಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇ 23ರಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಮಾಡಲಾಗುವುದು. 

110/33/11 ಕೆವಿ ಕುಂದಾಪುರ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಕುಂದಾಪುರ, ಸಂಗಮ್, ಇಂಡಸ್ಟ್ರೀಯಲ್, ಕುಂಭಾಶಿ, ಅಂಪಾರು, ಜಪ್ತಿ, ಬಳ್ಕೂರು, ಜಪ್ತಿ ವಾಟರ್ ಸಪ್ಲ್ಯೆ, ಗುರುಕುಲ ಮತ್ತು 33/11ಕೆವಿ ಕೋಟ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಕೆದೂರು ಮಾರ್ಗಗಳಲ್ಲಿ ಟ್ರೀ ಟ್ರಿಮ್ಮಿಂಗ್ ಮತ್ತು ಮಾರ್ಗ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಕುಂದಾಪುರ, ಹಂಗಳೂರು, ಕೋಟೇಶ್ವರ, ಕೊರ್ಗಿ, ಕಾಳಾವರ, ಅಂಪಾರು, ಜಪ್ತಿ, ಮೊಳಹಳ್ಳಿ, ಅಸೋಡು, ಯಡಾಡಿ-ಮತ್ಯಾಡಿ, ವಕ್ವಾಡಿ, ತೆಕ್ಕಟ್ಟೆ, ಕುಂಭಾಶಿ, ಅಂಪಾರು, ಹಳ್ನಾಡು, ಕಾವ್ರಾಡಿ, ಶಂಕರನಾರಾಯಣ, ಕೋಣಿ, ಬಳ್ಕೂರು, ಜಪ್ತಿ, ಹೊಂಬಾಡಿ-ಮಂಡಾಡಿ, ಕುಂದಾಪುರ ಪುರಸಭೆಯ ಕುಡಿಯುವ ನೀರಿನ ಸ್ಥಾವರ, ಬಸ್ರೂರು, ಆನಗಳ್ಳಿ, ಕಂದಾವರ, ಅಂಕದಕಟ್ಟೆ, ಕೆದೂರು, ಉಳ್ತೂರು, ಬೇಳೂರು ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇ 23 ರಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. 

110/11 ಕೆವಿ ಬೆಳ್ಮಣ್ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಫೀಡರ್‌ಗಳಾದ ಮುಂಡ್ಕೂರು, ನಂದಳಿಕೆ ಮತ್ತು ಬೆಳ್ಮಣ್ ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ  ಫೀಡರ್ ಗಳಲ್ಲಿ ಬೆಳ್ಮಣ್, ಗೋಳಿಕಟ್ಟೆ, ನೀಚಾಲು, ಬೆಳ್ಮಣ್ ದೇವಸ್ಥಾನ, ನಂದಳಿಕೆ, ಜಂತ್ರ, ಕೆದಿಂಜೆ, ಮಾನಕಟ್ಟೆ, ದೇಂದೊಟ್ಟು ಪದವು, ಇಟ್ಟಮೇರಿ, ಕೊರಜೆ, ಮುಂಡ್ಕೂರು, ಕಾಂಜರಕಟ್ಟೆ, ಸಚ್ಚರಿಪೇಟೆ, ಮುಲ್ಲಡ್ಕ, ಕೋಡಿಮಾರು, ಸಂಕಲಕರಿಯ, ನಾನಿಲ್‌ತಾರ್, ಜಾರಿಗೆಕಟ್ಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇ 23ರಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. 

33/11 ಕೆವಿ ಹೆಬ್ರಿ ಉಪ ವಿದ್ಯುತ್ ಸ್ಥಾವರದಿಂದ ಹೊರಡುವ 11ಕೆವಿ ಶಿವಪುರ, ಚಾರ, ಮುದ್ರಾಡಿ, ನಾಡ್ಪಾಲು ಫೀಡರಿನಲ್ಲಿ ವ್ಯವಸ್ಥಾ ಸುಧಾರಣಾ ಕಾಮಗಾರಿ ಹಾಗೂ ಮಾರ್ಗ ನಿರ್ವಹಣಾ ಕಾಮಗಾರಿ ಹಮ್ಮಿ ಕೊಂಡಿರುವುದರಿಂದ ಭಟ್ಟಂಪಳ್ಳಿ, ಪಾಂಡುಕಲ್ಲು, ಎಳ್ಳಾರೆ, ಶಂಕರಲಿಂಗೇಶ್ವರ ದೇವಸ್ಥಾನದ ಬಳಿ, ಮುಳ್ಳುಗುಡ್ಡೆ, ಕನ್ಯಾನ, ಶಿವಪುರ, ಕೆರೆಬೆಟ್ಟು, ಮಂಡಾಡಿಜೆಡ್ಡು, ಕಳ್ತೂರು, ಸಂತೆಕಟ್ಟೆ, ಕರ್ಜೆ, ಕುರ್ಪಾಡಿ, ಕನ್ಯಾನ, ಚಾರ, ಹೊಸೂರು, ಗಾಂಧೀನಗರ, ಮುದ್ರಾಡಿ, ಮುನಿಯಾಲು, ಬಚ್ಚಪ್ಪು, ಕಬ್ಬಿನಾಲೆ, ಸೀತಾನದಿ, ಸೋಮೇಶ್ವರ, ನಾಡ್ಪಾಲು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇ 24ರಂದು ಬೆಳಗ್ಗೆ 8:30ರಿಂದ ಸಂಜೆ 5:30ರ ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. 

110/33/11 ಕೆವಿ ಮಣಿಪಾಲ ವಿದ್ಯುತ್ ಉಪಕೇಂದ್ರದಲ್ಲಿ ಹೆಚ್ಚುವರಿ ಫೀಡರ್ ಕಾಮಗಾರಿಯನ್ನು ಹಮ್ಮಿಕೊಂಡಿ ರುವುದರಿಂದ ಈ ಉಪ ವಿದ್ಯುತ್ ಕೇಂದ್ರದಿಂದ ಹೊರಡುವ ಎಲ್ಲಾ 11ಕೆವಿ ಫೀಡರ್ ಮಾರ್ಗದಲ್ಲಿ ಹಯಗ್ರೀವ ನಗರ, ಲಕ್ಷ್ಮೀಂದ್ರನಗರ, ಇಂದ್ರಾಳಿ ರೈಲ್ವೆ ನಿಲ್ದಾಣ, ಎಂ.ಐ.ಟಿ. ಕ್ಯಾಂಪಸ್, ಕೆ.ಎಂ.ಸಿ ಆಸ್ಪತ್ರೆ, ಸಿಂಡಿಕೇಟ್ ಸರ್ಕಲ್, ಎಂ.ಜೆ.ಸಿ ಸ್ಕೂಲ್,  ಬಿ.ಎಸ್.ಎನ್.ಎಲ್, ಡಿ.ಸಿ ಆಫೀಸ್, ಆರ್.ಟಿ.ಒ. ಆಫೀಸ್, ಪೆರಂಪಳ್ಳಿ, ಸಗ್ರಿ ನೋಳೆ, ಈಶ್ವರನಗರ, ಸರಳೇಬೆಟ್ಟು, ಅರ್ಬಿ, ಪ್ರಗತಿನಗರ, ಶಿವಳ್ಳಿ ಇಂಡಸ್ಟ್ರೀಯಲ್ ಏರಿಯಾ, ಕೊರಂಗ್ರಪಾಡಿ, ಮಾರ್ಪಳ್ಳಿ, ಕುಕ್ಕಿಕಟ್ಟೆ, ಉದ್ಯಾವರ, ಕಟಪಾಡಿ, ಮಣಿಪುರ, ಮೂಡುಬೆಳ್ಳೆ, ಮರ್ಣೆ, ಕಟ್ಟಿಂಗೇರಿ, ಕೆಮ್ತೂರು, ರೋಯಲ್ ಎಂಬೆಸಿ, ಮಣಿಪಾಲ ಟೌನ್, ವೇಣುಗೋಪಾಲ ಟೆಂಪಲ್ ಹತ್ತಿರ, ಮಣಿಪಾಲ ಮೀಡಿಯಾ ನೆಟ್‌ವರ್ಕ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇ 24 ರಂದು ಬೆಳಗ್ಗೆ 9ರಿಂದ ಸಂಜೆ 5 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ. 

Similar News