ಮಾಹೆಯಿಂದ ಮಹಿಳಾ ಕುಲಪತಿಗಳ ಸಮಾವೇಶ

Update: 2023-05-23 16:31 GMT

ಮಣಿಪಾಲ, ಮೇ 23: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ವತಿಯಿಂದ ಡಬ್ಲ್ಯು20 ಮಾಹೆ ಮಹಿಳಾ ಕುಲಪತಿಗಳ ಸಮಾವೇಶ ಮೇ 26-27ರಂದು ಬೆಂಗಳೂರಿನಲ್ಲಿರುವ ಮಾಹೆ ವಿವಿ ಕ್ಯಾಂಪಸ್‌ನಲ್ಲಿ ನಡೆಯಲಿದೆ.

ಲಿಂಗ ಸಮಾನತೆ ಈ ಸಮಾವೇಶದ ಪ್ರಮುಖ ಧ್ಯೇಯವಾಗಿದ್ದು, ಜಿ20 ದೇಶಗಳ ಶೃಂಗಸಭೆಯ ಭಾಗವಾಗಿ ಇದು ನಡೆಯಲಿದೆ. ಭಾರತದ ವಿವಿಧ ಭಾಗಗಳಿಂದ ಆಗಮಿಸುವ 40ಕ್ಕೂ ಅಧಿಕ ಮಹಿಳಾ ನಾಯಕರು ಇದರಲ್ಲಿ  ಪಾಲ್ಗೊಳ್ಳಲಿದ್ದಾರೆ.

ಮಾಹೆ ವಿವಿಯ ಕುಲಪತಿ ಲೆ.ಜ.ಡಾ.ಎಂ.ಡಿ.ವೆಂಕಟೇಶ್, ಮಹಿಳಾ 20ಯ ಮುಖ್ಯಸ್ಥೆ ಡಾ.ಸಂಧ್ಯಾ ಪುರೇಚಾ ಅವರು ಮಹಿಳಾ ಸಬಲೀಕರಣದ ಈ ಸಮಾವೇಶದಲ್ಲಿ  ಪಾಲ್ಗೊಳ್ಳಲಿದ್ದಾರೆ. ಇವರೊಂದಿಗೆ ನಿವೃತ್ತ ಐಪಿಎಸ್ ಅಧಿಕಾರಿ ಭಾರತಿ ಘೋಷ್, ಡಾ.ಶಮಿಕಾ ರವಿ, ಧರಿತ್ರಿಪಾಟ್ನಾಯಕ್ ಮುಂತಾದವರು ಭಾಗವಹಿಸಲಿದ್ದಾರೆ.

ಇದರೊಂದಿಗೆ ಕರ್ನಾಟಕದ ಪ್ರಮುಖ ಜಾನಪದ ನೃತ್ಯಗಳನ್ನೊಳಗೊಂಡ ಸಾಸಂಸ್ಕೃತಿಕ ಸಂಜೆ ‘ನಮ್ಮೂರ ಹಬ್ಬ’ ಪ್ರದರ್ಶನಗೊಳ್ಳಲಿದೆ ಎಂದು ಮಾಹೆಯ ಪ್ರಕಟಣೆ ತಿಳಿಸಿದೆ.

Similar News