28 ಸಲ ಎವರೆಸ್ಟ್ ಪರ್ವತವೇರಿ ಕಮಿ ರೀಟಾ ಶೆರ್ಪಾ ದಾಖಲೆ
ಕಠ್ಮಂಡು, ಮೇ 23: ಹಿರಿಯ ಪರ್ವತಾರೋಹಿ ಕಮಿ ರೀಟಾ ಶೆರ್ಪಾ ಅವರು ದಾಖಲೆಯ 28ನೇ ಬಾರಿಗೆ ಎವರೆಸ್ಟ್ ಶಿಖರವನ್ನು ಏರುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಇದರೊಂದಿಗೆ ಕಾಮಿ ರಿಟಾ ಅವರು ಜಗತ್ತಿನ ಈ ಅತಿ ದೊಡ್ಡ ಶಿಖರವನ್ನು ಗರಿಷ್ಠ ಸಂಖ್ಯೆಯ ಆರೋಹಣದ ಮೂಲಕ ತನ್ನದೇ ಆದ ದಾಖಲೆಯನ್ನು ಮುರಿದಿದ್ದಾರೆ.
ಪರ್ವತಾರೋಹಿಗಳಿಗೆ ಮಾರ್ಗದರ್ಶಿಯಾಗಿ ಕೆಲಸ ಮಾಡುತ್ತಿರುವ 53 ವರ್ಷ ವಯಸ್ಸಿನ ಕಾಮಿರಿಟಾ ಅವರು ಮಂಗಳವಾರ ಬೆಳಗ್ಗೆ 9.20ರ ವೇಳೆಗೆ 8848.86 ಮೀಟರ್ ಎತ್ತರದ ಎವರೆಸ್ಟ್ ಶಿಖರದ ತುದಿಯನ್ನು ತಲುಪಿದರೆಂದು ಈ ಸಾಹಸಯಾತ್ರೆಯನ್ನು ಆಯೋಜಿಸಿದ್ದ ಸೆವೆನ್ ಸಮ್ಮಿಟ್ ಟ್ರೇಕ್ನ ಮ್ಯಾನೇಜರ್ ಚಾಂಗ್ ದೆವಾ ಶೆಲರ್ಪಾ ತಿಳಿಸಿದ್ದಾರೆ.
ಈ ವಸಂತಋತುವಿನಲ್ಲಿ ಕಾಮಿ ರಿಟಾ ಅವರು ಎವರೆಸ್ಟ್ ಶಿಖರವನ್ನು ಏರಿರುವುದು ಇದು ಎರಡನೆ ಸಲವಾಗಿದೆ.
ಪೂರ್ವ ನೇಪಾಳದ ಸೊಲುಖುಂಬು ಜಿಲ್ಲೆಯ ನಿವಾಸಿಯಾದ ಕಾಮಿ ರಿಟಾ ಅವರು 1994ರ ಮೇ 13ರಂದು ಮೊದಲ ಬಾರಿಗೆ ಏವರೆಸ್ಟ್ ಶಿಖರವನ್ನು ಏರಿದ್ದರು.
ಕಾಮಿರಿಟಾ ಅವರು ಎವೆಸ್ಟ್ ಅಲ್ಲದೆ ಕೆ2, ಮನಾಸ್ಲು ಹಾಗೂ ಚೊ ಒಯು ಸೇರಿದಂತೆ 8 ಸಾವಿರ ಮೀಟರ್ಗೂ ಅಧಿಕ ಎತ್ತರದ ಶಿಖರಗಳನ್ನು ಏರಿದ್ದರು.