×
Ad

ಉಡುಪಿ: ವಿ.ಬಿ. ಕಾನೂನು ಕಾಲೇಜಿನಲ್ಲಿ ಭಯೋತ್ಪಾದನೆ ತಡೆ ದಿನ

Update: 2023-05-24 21:42 IST

ಉಡುಪಿ: ಬಡತನ, ಹಸಿವು, ನಿರುದ್ಯೋಗ ಇವೆಲ್ಲವೂ ಭಯೋತ್ಪಾದನೆ ಚಟುವಟಿಕೆಗಳಿಗೆ ಕಾರಣವಾಗುತ್ತದೆ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.

ನಗರದ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ‘ಭಯೋತ್ಪಾದನೆ ತಡೆ ದಿನ’ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಎಲ್ಲಾ ಧರ್ಮಗಳನ್ನು ಸಮಾನ ರೀತಿಯಲ್ಲಿ ನೋಡಬೇಕು ಮತ್ತು ಅತಿರೇಕದ ರಾಷ್ಟ್ರಭಕ್ತಿ, ಧಾರ್ಮಿಕ ಭಕ್ತಿಯನ್ನು ಬಿಟ್ಟು ಎಲ್ಲರೂ ಸದ್ಭಾವನೆ ಯಿಂದ ಹಾಗೂ ಶಾಂತಿ ಮತ್ತು ಸಾಮಾಜಿಕ ಸೌಹಾರ್ದತೆಯಿಂದ ಬಾಳಬೇಕೆಂದು ಕರೆ ನೀಡಿದರು.

ಅಧ್ಯಕ್ಷತೆಯನ್ನು ಕಾಲೇಜಿನ ಕಾನೂನು ವಿಭಾಗದ ಮುಖ್ಯಸ್ಥೆ ಸುರೇಖಾ ಕೆ. ವಹಿಸಿದ್ದರು. ಎನ್ನೆಸ್ಸೆಸ್ ಕಾರ್ಯ ಕ್ರಮಾಧಿಕಾರಿ ಡಾ.ಸಿ.ಬಿ.ನವೀನ್‌ಚಂದ್ರ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ನಮ್ರತಾ ಸ್ವಾಗತಿಸಿ, ಚಿನ್ಮು ವಂದಿಸಿದರು. ಮಮತಾ ಕಾರ್ಯಕ್ರಮ ನಿರೂಪಿಸಿದರು. 

Similar News