ಪಾರಂಪಳ್ಳಿ ಸಮುದ್ರ ಕಿನಾರೆಗೆ ಅಪ್ಪಳಿಸಿದ ಮೀನುಗಾರಿಕೆ ಬೋಟು

Update: 2023-05-25 14:57 GMT

ಕುಂದಾಪುರ, ಮೇ 25: ಸಮುದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮೀನು ಗಾರಿಕಾ ಬೋಟೊಂದು ತಾಂತ್ರಿಕ ಸಮಸ್ಯೆಯಿಂದ ಗಾಳಿಯ ರಭಸಕ್ಕೆ ಪಾರಂಪಳ್ಳಿ ಪಡುಕರೆ ಸಮೀಪ ತೀರಕ್ಕೆ ಬಡಿದು ಲಕ್ಷಾಂತರ ರೂ. ಹಾನಿಯಾ ಗಿರುವ ಬಗ್ಗೆ ವರದಿಯಾಗಿದೆ.

ಬೆಂಗ್ರೆ ನಿವಾಸಿ ಸಂದೀಪ್ ತೋಳಾರ್ ಎಂಬವರ ಮಾಲಕತ್ವದ  ಶ್ರೀದುರ್ಗಾ ಪರಮೇಶ್ವರಿ ರುಕ್ಮಯ್ಯ ಹೆಸರಿನ ಬೋಟ್ ಸಮುದ್ರ ಮಧ್ಯೆ ಮೀನುಗಾರಿಕೆ ನಡೆಸುತ್ತಿದ್ದು, ಈ ವೇಳೆ ನೀರಿನಲ್ಲಿ ತೇಲಿ ಬಂದ ಬಲೆಯು ಬೋಟಿನ ಪ್ಯಾನಿಗೆ ಸಿಲುಕಿತ್ತೆನ್ನಲಾಗಿದೆ. ಇದರ ಪರಿಣಾಮ ಬೋಟ್‌ನ ಇಂಜಿನ್ ಸ್ತಬ್ಧಗೊಂಡು ಗಾಳಿಯ ರಭಸಕ್ಕೆ ತೀರ ಕಡೆ ಸಾಗಿ ಬಂದು ಮರಳು ದಿಬ್ಬಕ್ಕೆ ಬಡಿದು ಮುಳುಗಲಾರಂಭಿಸಿತು.

ಈ ವೇಳೆ ಸಮೀಪದಲ್ಲಿದ್ದ ಬೋಟ್‌ಗಳು ಸಹಾಯಕ್ಕೆ ಬಂದರೂ ಯಾವುದೇ  ಪ್ರಯೋಜನವಾಗಲಿಲ್ಲ. ಬೋಟಿನ ಲ್ಲಿದ್ದ ಕಾರ್ಮಿಕರನ್ನ ಸುರಕ್ಷಿತವಾಗಿ ಬೇರೆ ಬೋಟಿನವರು ದಡಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಬೋಟಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಮೀನುಗಳು ಹಾಗೂ ಮೀನುಗಾರಿಕೆ ಪರಿಕರಗಳು ಬೋಟಿನೊಂದಿಗೆ ಮುಳುಗಡೆಯಾಗಿದೆ. ಇದರಿಂದ ಅಂದಾಜು ಸುಮಾರು 12 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.

Similar News