ಅಂಕಪಟ್ಟಿ ಪರಿಶೀಲನೆಗೆ ಶುಲ್ಕ ಇಳಿಕೆ: ಶಾಸಕ ಗಂಟಿಹೊಳೆ ಮನವಿಗೆ ಸ್ಪಂದನೆ

Update: 2023-05-25 15:34 GMT

ಬೈಂದೂರು: ಅಂಕಪಟ್ಟಿ ಪರಿಶೀಲನೆಗೆ ವಿದ್ಯಾರ್ಥಿಗಳು ಪಾವತಿಸುತ್ತಿದ್ದ ದುಬಾರಿ ಶುಲ್ಕವನ್ನು ಇಳಿಸಲು ಕ್ರಮ ಕೈಗೊಳ್ಳಬೇಕೆಂಬ ಬೈಂದೂರು ಶಾಸಕ ಗುರುರಾಜ್ ಗಂಟೆಹೊಳೆ ಟ್ವಿಟ್ ಮೂಲಕ ಮಾಡಿರುವ ಮನವಿಗೆ ಮಂಗಳೂರು ವಿವಿ ಸ್ಪಂದಿಸಿದೆ.

ಮಂಗಳೂರು ವಿವಿಯ ಪದವೀಧರ ತನ್ನ 6 ಸೆಮಿಸ್ಟರ್‌ಗಳ ಅಂಕಪಟ್ಟಿಗಳನ್ನು ಪರಿಶೀಲಿಸಲು 9 ಸಾವಿರ ರೂ. ಮೂಲ ಶುಲ್ಕ ಹಾಗೂ ಇತರ ಶುಲ್ಕ ಸೇರಿ ಒಟ್ಟು 10,800ರೂ. ಪಾವತಿಸಬೇಕಾಗುತ್ತದೆ. ಇದು ಮಂಗಳೂರು ವಿ.ವಿ.ಯಲ್ಲಿ ಕಲಿತ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅದರಲ್ಲೂ ಪ್ರಮುಖವಾಗಿ ಗ್ರಾಮಾಂತರ ಪ್ರದೇಶದ ಬಡ ಮಕ್ಕಳಿಗೆ ಹೊರೆಯಾಗಿತ್ತು.

ತುಮಕೂರು ರಾಜ್ಯದಲ್ಲಿಯೇ 6 ವಿಷಯಗಳ ಅಂಕಪಟ್ಟಿಗೆ ಕೇವಲ 501 ರೂ. ಶುಲ್ಕವನ್ನಷ್ಟೇ ತೆಗೆದುಕೊಳ್ಳುತ್ತಿದೆ. ಈ ಬಗ್ಗೆ ಮಂಗಳೂರು ವಿ.ವಿ.ಯ ಉಪ ಕುಲಪತಿಗಳು ಉತ್ತಮ ನಿರ್ಧಾರವನ್ನು ಕೈಗೊಂಡು, ಕರಾವಳಿಯ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮಾಡಿಕೊಡಬೇಕು ಎಂದು ಗಂಟಿಹೊಳೆ ಟ್ವೀಟ್‌ನಲ್ಲಿ ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸಿದ ಮಂಗಳೂರು ವಿವಿ ಶುಲ್ಕವನ್ನು ಕಡಿಮೆ ಮಾಡುವ ಮೂಲಕ ಪದವೀಧರರ ಆರ್ಥಿಕ ಹೊರೆ ಕಡಿಮೆಯಾಗಿದೆ. ಪ್ರತಿ ವಿಷಯದ ಅಂಕಪಟ್ಟಿಯ ಮೇಲೆ 500ರೂ. ಇಳಿಕೆ ಮಾಡಿದೆ ಎಂದು ತಿಳಿದು ಬಂದಿದೆ.

Similar News