ಮಂಗಳೂರು: ಪ್ರತ್ಯೇಕ ಪ್ರಕರಣ; ಮೂರು ಮಂದಿ ನಾಪತ್ತೆ

Update: 2023-05-25 16:36 GMT

ಮಂಗಳೂರು, ಮೇ 25: ನಗರದ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತ್ಯೇಕ ಪ್ರಕರಣದಲ್ಲಿ ಮೂರು ಮಂದಿ ಕಾಣೆಯಾದ ಬಗ್ಗೆ ವರದಿಯಾಗಿದೆ.

ತ್ರಿಪುರ ರಾಜ್ಯದ ರಿಪನ್ ನಾಮಾ ಎಂಬಾತ 2 ತಿಂಗಳ ಹಿಂದೆ ಪತ್ನಿ ಸುಮಿತಾ ರಾಣಿ ಸರ್ಕಾರ್ (23) ಮತ್ತು ಪುತ್ರಿ ರಿಯಾ ನಾಮ (6) ಜೊತೆ ಮಂಗಳೂರಿಗೆ ಆಗಮಿಸಿ ಸಂಸಾರ ಮಾಡುತ್ತಿದ್ದ ಎನ್ನಲಾಗಿದೆ. ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದ ಈತ ಮೇ 23ರಂದು ಕೆಲಸಕ್ಕೆ ಹೋಗಿ ಮಧ್ಯಾಹ್ನ 12ಕ್ಕೆ ಮನೆಗೆ ಬಂದಾಗ ಪತ್ನಿ ಮತ್ತು ಪುತ್ರಿ ಇರಲಿಲ್ಲ. ಪತ್ನಿಯ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ಹಾಗಾಗಿ ಪುತ್ರಿಯೊಂದಿಗೆ ನಾಪತ್ತೆಯಾದ ತನ್ನ ಪತ್ನಿಯನ್ನು ಹುಡುಕಿಕೊಡುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

ನಗರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಾಗಿದ್ದ ವಿವಾಹಿತೆ ಮರಿಯಂ ಸನಾ ನಾಪತ್ತೆಯಾದ ಬಗ್ಗೆ ಪತಿ ಶೇಖ್ ಮುಹಮ್ಮದ್ ಶಂಶೀರ್ ಎಂಬವರು ಪಾಂಡೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ.

ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿರುವ ಶೇಖ್ ಮುಹಮ್ಮದ್ ಶಂಶೀರ್ 9 ವರ್ಷದ ಹಿಂದೆ ಕಾರ್ಕಳದ ಮರಿಯಂ ಸನಾ (29) ಎಂಬಾಕೆಯನ್ನು ಮದುವೆಯಾಗಿದ್ದು, ಎರಡು ಹೆಣ್ಣು ಮತ್ತು ಒಬ್ಬ ಗಂಡು ಸಹಿತ ಮೂವರು ಮಕ್ಕಳು ಈ ದಂಪತಿಗಿದ್ದಾರೆ. ಇವರು ಕಳೆದ 1 ವರ್ಷದಿಂದ ಮಂಗಳೂರಿನಲ್ಲಿ ನೆಲೆಸಿದ್ದಾರೆ.

ಮೇ 19ರಂದು ಶೇಖ್ ಮುಹಮ್ಮದ್ ಶಂಶೀರ್ ಮನೆಯಲ್ಲಿ ಮಲಗಿಕೊಂಡಿದ್ದು, ಬೆಳಗ್ಗೆ 9:30ಕ್ಕೆ ಎದ್ದಾಗ ಪತ್ನಿ ಮರಿಯಂ ಸನಾ ಕಾಣಲಿಲ್ಲ ಎನ್ನಲಾಗಿದೆ. ಸುತ್ತಮುತ್ತ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ ಎಂದು ಹೇಳಲಾಗಿದೆ. ಅಪಾರ್ಟ್‌ಮೆಂಟ್ ಪಕ್ಕದ ರತ್ನಾ ಜುವೆಲ್ಲರಿ ಶಾಪ್‌ನ ಸಿಸಿಟಿವಿ ಪೂಟೇಜ್ ನೋಡಿದಾಗ ಮರಿಯಂ ಸನಾ ಬ್ಯಾಗ್ ಹಿಡಿದುಕೊಂಡು ಮುಂಜಾವ 3:12ಕ್ಕೆ ನಡೆದುಕೊಂಡು ಹೋಗಿರುವುದು ಕಂಡು ಬಂದಿದೆ. ಈ ಸಂದರ್ಭ 10 ಪವನ್ ಚಿನ್ನಾಭರಣ ಹಾಗೂ ಬಟ್ಟೆಬರೆಗಳನ್ನು ತೆಗೆದುಕೊಂಡು ಹೋಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

Similar News