ನೂತನ ಸಂಸತ್ ಭವನ ಉದ್ಘಾಟನೆ ರಾಜಕೀಯ ಪಕ್ಷದ ಕಾರ್ಯಕ್ರಮ ಅಲ್ಲ: ಸಂಜಯ್ ರಾವುತ್

Update: 2023-05-26 15:44 GMT

ಮುಂಬೈ, ಮೇ 26: ನೂತನ ಸಂಸತ್ ಭವನದ ಉದ್ಘಾಟನೆ ರಾಷ್ಟ್ರೀಯ ಕಾರ್ಯಕ್ರಮ. ರಾಜಕೀಯ ಪಕ್ಷದ ಕಾರ್ಯಕ್ರಮ ಅಲ್ಲ ಎಂದು ಶಿವಸೇನೆ (UBT) ನಾಯಕ ಸಂಜಯ್ ಸಿಂಗ್ ರಾವುತ್ ಅವರು ಶುಕ್ರವಾರ ಹೇಳಿದ್ದಾರೆ.

ನೂತನ ಸಂಸತ್ ಭವನದ ಲೋಕಾರ್ಪಣೆ ಕಾರ್ಯಕ್ರಮವನ್ನು 20  ಪ್ರತಿಪಕ್ಷಗಳು ಬಹಿಷ್ಕರಿಸಲು ನಿರ್ಧರಿಸಿರುವ ನಡುವೆ ಸಂಜಯ್ ರಾವುತ್ ಅವರು ಈ ಹೇಳಿಕೆ ನೀಡಿದ್ದಾರೆ.

ನಾವು ನೂತನ ಸಂಸತ್ ಭವನವನ್ನು ಉದ್ಘಾಟಿಸುವುದನ್ನು ವಿರೋಧಿಸುವುದಿಲ್ಲ. ಆದರೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕಾರ್ಯಕ್ರಮಕ್ಕೆ ಯಾಕೆ ಆಹ್ವಾನಿಸಿಲ್ಲ ಎಂಬುದನ್ನು ತಿಳಿಯಲು ಬಯಸುತ್ತೇವೆ. ಉಪ ರಾಷ್ಟ್ರಪತಿ ಅವರು ಎಲ್ಲಿದ್ದಾರೆ, ರಾಜ್ಯ ಸಭೆಯ ಅಧ್ಯಕ್ಷರು ಯಾರು ? ಎಂದು ಅವರು ಪ್ರಶ್ನಿಸಿದ್ದಾರೆ. ಆಹ್ವಾನಿತರ ಪಟ್ಟಿಯಲ್ಲಿ ಸ್ಪೀಕರ್ ಓಂ ಪ್ರಕಾಶ್ ಅವರ ಹೆಸರು ಸೇರಿಸಿ ಎಂದು ರಾವುತ್ ಅವರು ಹೇಳಿದ್ದಾರೆ.

ಪ್ರಶ್ನೆಗಳಿಗೆ ಪ್ರತಿಕ್ರಿಯ ನೀಡುವ ಬದಲು ಇಂದಿರಾ ಗಾಂಧಿ ಈಗಿರುವ ಸಂಸತ್ ಭವನದ ವಿಸ್ತರಣಾ ಕಟ್ಟಡವನ್ನು ಉದ್ಘಾಟಿಸಿದ್ದರು, ರಾಜೀವ್ ಗಾಂಧಿ ಅವರು ಸಂಸತ್ ನ ಗ್ರಂಥಾಲಯ ಉದ್ಘಾಟಿಸಿದ್ದರು ಎಂದು ಬಿಜೆಪಿ ಕಾರಣ ನೀಡುತ್ತಿದೆೆ. ಸಂಸತ್ ಭವನದ ವಿಸ್ತರಣಾ ಕಟ್ಟಡ, ಲೈಬ್ರೆರಿ ಹಾಗೂ ಮುಖ್ಯ ಕಟ್ಟಡಗಳ ನಡುವೆ ಭಿನ್ನತೆ ಇದೆ ಎಂದು ಸಂಜಯ್ ರಾವುತ್ ಹೇಳಿದ್ದಾರೆ.

Similar News