ಮುಂದಿನ ವಾರ ನೇಪಾಳ ಪ್ರಧಾನಿ ಭಾರತಕ್ಕೆ ಭೇಟಿ, ಉಜ್ಜಯಿನಿ, ಇಂದೋರ್ ಗೆ ಭೇಟಿ

Update: 2023-05-27 09:02 GMT

ಹೊಸದಿಲ್ಲಿ: ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಅವರು ಮುಂದಿನ ವಾರ ಭಾರತಕ್ಕೆ 4 ದಿನಗಳ ಕಾಲ ಅಧಿಕೃತ ಭೇಟಿಯ ಸಮಯದಲ್ಲಿ ಮಧ್ಯಪ್ರದೇಶದ ಉಜ್ಜಯಿನಿ ಹಾಗೂ  ಇಂದೋರ್‌ಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಅಧಿಕಾರ ವಹಿಸಿಕೊಂಡ ಪ್ರಧಾನಿ ದಹಲ್ ಅವರು ತಮ್ಮ ಭಾರತೀಯ ಸಹವರ್ತಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಮೇ 31ರಿಂದ ಜೂನ್ 3 ರ ತನಕ  ತಮ್ಮ ಭಾರತ ಪ್ರವಾಸವನ್ನು ಆರಂಭಿಸಲಿದ್ದಾರೆ.

ಭಾರತದ ಭೇಟಿಯ ವೇಳೆ ನೇಪಾಳದ ಪ್ರಧಾನಿ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಉಪ ರಾಷ್ಟ್ರಪತಿ ಜಗದೀಪ್ ಧಂಖರ್ ಅವರನ್ನು ಭೇಟಿ ಮಾಡಲಿದ್ದಾರೆ.

ಅಧಿಕೃತ ಕಾರ್ಯಕ್ರಮಗಳ ಜೊತೆಗೆ, ನೇಪಾಳದ ಪ್ರಧಾನಿ ತಮ್ಮ ಭೇಟಿಯ ಭಾಗವಾಗಿ ಉಜ್ಜಯಿನಿ ಮತ್ತು ಇಂದೋರ್‌ಗೆ ಭೇಟಿ ನೀಡಲಿದ್ದಾರೆ ಎಂದು MEA ಅಧಿಕೃತ ಪ್ರಕಟಣೆ ತಿಳಿಸಿದೆ.

ನೇಪಾಳ ಪ್ರಧಾನಿ ದಹಲ್ ಅವರ ಭೇಟಿಯ ಸಂದರ್ಭದಲ್ಲಿ ಉನ್ನತ ಮಟ್ಟದ ನಿಯೋಗವೊಂದು ಅವರ ಜೊತೆಗಿರುತ್ತದೆ.

Similar News