ಇಮ್ರಾನ್ ದೇಹದಲ್ಲಿ ಕೊಕೇನ್ ಅಂಶ ಪತ್ತೆ: ಪಾಕ್ ಸಚಿವ

Update: 2023-05-27 16:22 GMT

ಇಸ್ಲಮಾಬಾದ್, ಮೇ 27: ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಮೂತ್ರಪರೀಕ್ಷೆಯ ವರದಿಯಲ್ಲಿ ಆಲ್ಕೋಹಾಲ್ ಮತ್ತು ಕೊಕೇನ್ನಂತಹ ವಿಷಕಾರಿ ರಾಸಾಯನಿಕಗಳ ಪುರಾವೆ ಲಭ್ಯವಾಗಿದೆ ಎಂದು ಪಾಕಿಸ್ತಾನದ ಆರೋಗ್ಯ ಸಚಿವ ಅಬ್ದುಲ್ ಖಾದಿರ್ ಪಟೇಲ್ ಹೇಳಿದ್ದಾರೆ.

ಆರೋಗ್ಯ ಸಚಿವರ ಹೇಳಿಕೆಗೆ ಇಮ್ರಾನ್ ಅವರ ಪಿಟಿಐ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇಮ್ರಾನ್ ಬಗ್ಗೆ ಅನುಚಿತ ಮತ್ತು ಸುಳ್ಳು ಹೇಳಿಕೆ ನೀಡಿರುವ ಪಟೇಲ್ ಹಾಗೂ ಅವರ ಸಹಾಯಕರ ವಿರುದ್ಧ ಕಾನೂನು ಕ್ರಮದ ಮೊರೆಹೋಗುವುದಾಗಿ ಘೋಷಿಸಿದೆ.

ಶುಕ್ರವಾರ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ್ದ ಸಚಿವ ಪಟೇಲ್ `ಇಮ್ರಾನ್ ಬಂಧನದ ಬಳಿಕ ಅವರ ಮೂತ್ರದ ಸ್ಯಾಂಪಲನ್ನು ಪಾಕಿಸ್ತಾನ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈಯನ್ಸ್ನಲ್ಲಿ ಪರೀಕ್ಷೆ ನಡೆಸಿದ್ದು ಅದರ ವರದಿ ಪ್ರಕಾರ ಇಮ್ರಾನ್ರ ಮಾನಸಿಕ  ಸ್ಥಿರತೆ ಪ್ರಶ್ನಾರ್ಹವಾಗಿದೆ. ಅಲ್ಲದೆ ಅವರ ದೇಹದಲ್ಲಿ ಆಲ್ಕೋಹಾಲ್ ಮತ್ತು ಕೊಕೇನ್ನ ಅಂಶಗಳೂ ಪತ್ತೆಯಾಗಿವೆ. ಈ ವರದಿ ಸಾರ್ವಜನಿಕ ದಾಖಲೆಯಾಗಿರುವುದರಿಂದ ಅದನ್ನು ಸಾರ್ವಜನಿಕರ ವೀಕ್ಷಣೆಗೆ ಇರಿಸಲಾಗುವುದು' ಎಂದಿದ್ದರು.

Similar News