ಉಡುಪಿ: ವಿಬಿಸಿಎಲ್‌ನಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಜಾಗೃತಿ ಜಾಥ

Update: 2023-05-27 16:41 GMT

ಉಡುಪಿ: ಕುಂಜಿಬೆಟ್ಟಿನ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಕಾನೂನು ನೆರವು ಘಟಕದ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ ಮತ್ತು ಕೆರೆಗಳ ಸಂರಕ್ಷತೆ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಜಾಗೃತಿ ಜಾಥ ನಡೆಯಿತು.

ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಪ್ರೊ. ರೋಹಿತ್ ಎಸ್ ಅಮೀನ್,  ಇಂದಿನ ಆಧುನಿಕ ಯುಗದಲ್ಲಿ ಕೆರೆಗಳ ಒತ್ತುವರಿ ಹಾಗೂ ಜಲ ಸಂರಕ್ಷಣೆಯ ಬಗ್ಗೆ ಜಾಗೃತಿಯ ಕೊರತೆಯಾಗಿರುವುದೇ ಇಂದಿನ ಜಲ ಸಮಸ್ಯೆಗೆ ಮೂಲ ಕಾರಣ. ಇದಕ್ಕಾಗಿ ಜಲಪೂರಣ ಕಾರ್ಯಗಳನ್ನು ಕೈಗೊಳ್ಳಬೇಕೆಂದು ತಿಳಿಸಿದರು.

ಕಾಲೇಜಿನ ಎನ್ನೆಸ್ಸೆಸ್ ಅಧಿಕಾರಿ ಡಾ.ಸಿ.ಬಿ ನವೀನ್‌ಚಂದ್ರ ಸ್ವಚ್ಚತೆಯ ಮಹತ್ವ ತಿಳಿಸಿದರು. ಕಾನೂನು ನೆರವು ಘಟಕದ ಪ್ರೊ. ಈರಪ್ಪ ಎಸ್ ಮೇದಾರ್ ಹಾಜರಿದ್ದರು. 

ವಿದ್ಯಾರ್ಥಿ ಪ್ರತಿನಿಧಿ ಸುಶ್ಮಿತ ಎಸ್ ಕುಂದರ್ ಸ್ವಾಗತಿಸಿದರು. ಶ್ವೇತಾ ಪೈ ವಂದಿಸಿದರು. ಮಮತಾ ಕಾರ್ಯಕ್ರಮ ನಿರೂಪಿಸಿದರು.

Similar News