ಜುಗಾರಿ ಆರೋಪ : 10 ಮಂದಿ ಬಂಧನ

Update: 2023-05-29 14:22 GMT

ಉಡುಪಿ, ಮೇ 29: ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ 76 ಬಡಗುಬೆಟ್ಟು ಗ್ರಾಮದ ಮೀನು ಮಾರ್ಕೆಟ್ ಹಿಂಭಾಗ ಮೇ 28ರಂದು ಅಂದರ್-ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಬಗ್ಗೆ ಅಮೀನಸಾಬಿ ಮೊಕಾಶಿ (48), ಶಿವಪ್ಪ(38), ಸುಬ್ರಹ್ಮಣ್ಯ(30), ಭರಮಪ್ಪ (48), ಅಮೀನ್ ಸಾಹೇಬ್ (35) ಎಂಬವರು ಬಂಧಿಸಿ, 18,600ರೂ. ನಗದು ವಶಪಡಿಸಿಕೊಂಡಿದ್ದಾರೆ.

ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಹೆಜಮಾಡಿ ಗ್ರಾಮದ ಗುಂಡಿ ಸ್ಮಶಾನದ ಎದುರುಗಡೆ ಇಸ್ಪೀಟು ಜುಗಾರಿ ಆಡುತ್ತಿದ್ದ ಚೇತನ್ ಪೂಜಾರಿ (34), ಅಭಿಜಿತ್ (39), ಗಣೇಶ(27) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಮಟ್ಕಾ ಜುಗಾರಿಗೆ ಸಂಬಂಧಿಸಿ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತ್ರಾಸಿ ಗ್ರಾಮದ ಎಚ್.ಪಿ. ಪೆಟ್ರೋಲ್ ಬಂಕ್ ಬಳಿ ಪ್ರಕಾಶ್ ಶೆಟ್ಟಿಗಾರ(46), ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಸಾಂತೂರು ಗ್ರಾಮದ ಮುದ ರಂಗಡಿ ಮೀನು ಮಾರ್ಕೆಟ್ ಬಳಿ ದಿನೇಶ್ ಶೆಟ್ಟಿ(54) ಎಂಬವರನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ.

Similar News