​ಉಡುಪಿ: ಆನ್‌ಲೈನ್‌ನಲ್ಲಿ 7 ಲಕ್ಷ ರೂ. ವಂಚನೆ; ಪ್ರಕರಣ ದಾಖಲು

Update: 2023-05-30 16:18 GMT

ಉಡುಪಿ, ಮೇ 30: ಸೂರ್ಯಾನ್ಶ್ ಸುನಿಲ್ (22) ಎಂಬವರು ಡೆಮ್ಕೊ ಗ್ರೂಪ್ ಡಿಜಿಟಲ್ ಮಾರ್ಕೆಟಿಂಗ್ ಕಂಪೆನಿ ಇಂಡಿಯಾ ಎಂಬ ಕಂಪೆನಿಯಲ್ಲಿ ಪಾರ್ಟ್‌ಟೈಮ್ ಕೆಲಸ ಮಾಡಿ ಹಣ ಗಳಿಸುವ ಬಗ್ಗೆ ಬಂದ ವಾಟ್ಸಪ್ ಸಂದೇಶವನ್ನು ನಿಜವೆಂದು ನಂಬಿ 7.30 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ.

ಮೇ 20ರಂದು ಬಂದ ಸಂದೇಶದಂತೆ ಸ್ನೇಹ ಶರ್ಮ ಎಂಬವರನ್ನು ಸುನಿಲ್ ಅವರು ಸಂಪರ್ಕಿಸಿದಾಗ ಕಂಪೆನಿಯಲ್ಲಿ ಟಾಸ್ಕ್ ನಡೆಸುವ ಬಗ್ಗೆ ಹಣ ಪಾವತಿಸುವಂತೆ ಸೂಚಿಸಿ ಬ್ಯಾಂಕ್ ಖಾತೆಗಳ ವಿವರ ನೀಡಲಾಗಿತ್ತು. ಇದನ್ನು ನಿಜವೆಂದು ನಂಬಿದ ಸುನಿಲ್ ಮೇ 21ರಿಂದ 26ರವರೆಗೆ ಒಟ್ಟು 7,30,926 ರೂ.ಗಳನ್ನು ಆರೋಪಿಗಳ ವಿವಿಧ ಖಾತೆಗೆ ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿದ್ದರು.

ಆದರೆ ಅರೋಪಿಗಳು ಟಾಸ್ಕ್ ನಡೆಸಿದ ಬಳಿಕ ಹಣ ನೀಡದೇ, ಇವರು ವರ್ಗಾವಣೆ ಮಾಡಿದ ಹಣವನ್ನು ವಾಪಾಸು ಮಾಡದೇ ಮೋಸ ಮಾಡಿರುವುದಾಗಿ ಸುನಿಲ್ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಐಟಿ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತಿದ್ದಾರೆ.

Similar News