ಸಿಂಗಾಪುರ:‌ ಹಣ, ಆಭರಣ ದುರುಪಯೋಗ ಮಾಡಿದ ಭಾರತೀಯ ಅರ್ಚಕನಿಗೆ ಜೈಲು

Update: 2023-05-30 16:59 GMT

ಸಿಂಗಾಪುರ, ಮೇ 30: ಸಿಂಗಾಪುರದ ಹಿಂದೂ ದೇವಸ್ಥಾನದ 1.5 ದಶಲಕ್ಷ ಡಾಲರ್ ಮೌಲ್ಯದ ಆಭರಣಗಳನ್ನು ದುರುಪಯೋಗ ಮಾಡಿದ ಪ್ರಕರಣದಲ್ಲಿ ಭಾರತೀಯ ಮೂಲದ ಅರ್ಚಕನಿಗೆ ಅಲ್ಲಿನ ನ್ಯಾಯಾಲಯ 6 ವರ್ಷದ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

2013ರ ಡಿಸೆಂಬರ್ ನಲ್ಲಿ ಕಂದಸಾಮಿ ಸೇನಾಪಥಿಯನ್ನು ಸಿಂಗಾಪುರದ ಚೀನಾಟೌನ್ ಜಿಲ್ಲೆಯ ಮಾರಿಯಮ್ಮನ್ ದೇವಾಲಯದ ಮುಖ್ಯ ಅರ್ಚಕನಾಗಿ ನೇಮಕ ಮಾಡಲಾಗಿತ್ತು. ದೇವಾಲಯದ ಆಭರಣಗಳ ದುರುಪಯೋಗ ಮತ್ತು ಅಪ್ರಾಮಾಣಿಕ ನಡವಳಿಕೆಗಾಗಿ ಸೇನಾಪಥಿ ವಿರುದ್ಧ ಪ್ರಕರಣ ದಾಖಲಾಗಿದ ಬಳಿಕ 2020ರ ಮಾರ್ಚ್ 30ರಂದು ರಾಜೀನಾಮೆ ನೀಡಿದ್ದರು. ಇದೀಗ ಅಪರಾಧ ಸಾಬೀತಾಗಿರುವುದರಿಂದ 6 ವರ್ಷದ ಜೈಲುಶಿಕ್ಷೆ ವಿಧಿಸಲಾಗಿದೆ ಎಂದು ವರದಿಯಾಗಿದೆ.

Similar News