ಹಾಲಿವುಡ್ ಬೀಚ್‌ ನಲ್ಲಿ ಶೂಟೌಟ್: 9 ಮಂದಿಗೆ ಗಾಯ

Update: 2023-05-30 17:09 GMT

ವಾಷಿಂಗ್ಟನ್: ಅಮೆರಿಕದ ಫ್ಲೋರಿಡಾದಲ್ಲಿರುವ ಹಾಲಿವುಡ್ ಬೀಚ್‌ ನಲ್ಲಿ ಸೋಮವಾರ ಸಂಜೆ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ 9 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಹಾಲಿವುಡ್ ನ ಬೋರ್ಡ್ವಾಕ್ ಬೀಚ್ ನಲ್ಲಿ ಎರಡು ಗುಂಪಿನ ನಡುವೆ ಆರಂಭವಾದ ಮಾತಿನ ಚಕಮಕಿ ಗುಂಡಿನ ದಾಳಿಗೆ ಕಾರಣವಾಗಿದೆ. ಗಾಯಗೊಂಡವರಲ್ಲಿ ಹಲವರನ್ನು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ವಕ್ತಾರ ಡಿಯೆನಾ ಬೆಟ್ಟಿನೆಷಿ ಹೇಳಿದ್ದಾರೆ. ಆದರೆ ಗಾಯಗೊಂಡವರ ವಯಸ್ಸಿನ ಬಗ್ಗೆ ಅಥವಾ ಅವರ ಆರೋಗ್ಯಸ್ಥಿತಿಯ ಬಗ್ಗೆ ಅವರು ಮಾಹಿತಿ ನೀಡಿಲ್ಲ.

ಬೀಚ್ ನಲ್ಲಿರುವ ಅಂಗಡಿಯ ಎದುರು ಎರಡು ಗುಂಪಿನ ಮಧ್ಯೆ ಹೊಡೆದಾಟ ಸಂಭವಿಸಿದೆ. ಆಗ ಒಬ್ಬ ತನ್ನಲ್ಲಿದ್ದ ಗನ್ ತೆಗೆದು ಗುಂಡು ಹಾರಿಸಿದ್ದಾನೆ. ಆಗ ಅಲ್ಲಿದ್ದವರು ಗಾಭರಿಗೊಂಡು ಓಡಿದ್ದಾರೆ. ಶೂಟೌಟ್ ಗೆ ಸಂಬಂಧಿಸಿ ಓರ್ವ ಶಂಕಿತನನ್ನು ವಶಕ್ಕೆ ಪಡೆದಿದ್ದು ಪರಾರಿಯಾಗಿರುವ ಮತ್ತೊಬ್ಬನ ಪತ್ತೆಕಾರ್ಯ ಪ್ರಗತಿಯಲ್ಲಿದೆ ಎಂದು ವರದಿಯಾಗಿದೆ.

Similar News