ಐಟಿ ಅಧಿಕಾರಿಗಳ ಸೋಗಿನಲ್ಲಿ 60 ಲಕ್ಷ ಮೌಲ್ಯದ 17 ಚಿನ್ನದ ಬಿಸ್ಕತ್ ಕಳವು, ನಾಲ್ವರ ಬಂಧನ

Update: 2023-05-31 06:25 GMT

ಹೈದರಾಬಾದ್: ಆದಾಯ ತೆರಿಗೆ ಅಧಿಕಾರಿಗಳಂತೆ ನಟಿಸಿ ಹೈದರಾಬಾದ್‌ನ ಅಂಗಡಿಯೊಂದರಿಂದ  60 ಲಕ್ಷ  ರೂ. ಮೌಲ್ಯದ ಚಿನ್ನದ ಬಿಸ್ಕತ್‌ಗಳನ್ನು ಕದ್ದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಹೈದರಾಬಾದ್ ಸಿಟಿಯ ಪೊಲೀಸ್ ಕಮಿಷನರ್ ಸಿ.ವಿ. ಆನಂದ್ ಅವರ ಪ್ರಕಾರ, ಆರೋಪಿಗಳನ್ನು ರೆಹಮಾನ್ ಗಫೂರ್ ಅಥರ್, ಝಾಕಿರ್ ಗನಿ ಅಥರ್, ಪ್ರವೀಣ್ ಯಾದವ್ ಹಾಗೂ  ಆಕಾಶ್ ಅರುಣ್ ಹೊವಿಲ್ ಎಂದು ಗುರುತಿಸಲಾಗಿದೆ.

ಘಟನೆಯ ವಿವರಗಳನ್ನು ಹಂಚಿಕೊಂಡ ಆಯುಕ್ತರು, ಮೇ 27 ರಂದು ಹೈದರಾಬಾದ್‌ನ ಮೋಂಡಾ ಮಾರ್ಕೆಟ್‌ನಲ್ಲಿರುವ ಸಿದ್ಧಿವಿನಾಯಕ್ ಎಂಬ ಅಂಗಡಿಯಿಂದ 8 ರಿಂದ 10 ಜನರು ಆದಾಯ ತೆರಿಗೆ ಅಧಿಕಾರಿಗಳಂತೆ  ಪೋಸ್ ನೀಡಿ  60 ಲಕ್ಷ ರೂ. ಮೌಲ್ಯದ 17 ಚಿನ್ನದ ಬಿಸ್ಕತ್‌ಗಳನ್ನು ಕಳವು ಮಾಡಿದ್ದಾರೆ.

ಆರೋಪಿಗಳಿಂದ ಏಳು ಚಿನ್ನದ ಬಿಸ್ಕತ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇತರ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೇ 27ರಂದು ಮೋಂಡಾ ಮಾರ್ಕೆಟ್‌ನಲ್ಲಿರುವ ಸಿದ್ಧಿವಿನಾಯಕ್  ಹೆಸರಿನ ಅಂಗಡಿಯಿಂದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ಸೋಗಿನಲ್ಲಿ  ಬಂದ 8-10 ಮಂದಿ   60 ಲಕ್ಷ ರೂ. ಮೌಲ್ಯದ 17 ಚಿನ್ನದ ಬಿಸ್ಕತ್‌ಗಳನ್ನು ಕಳವು ಮಾಡಿದ್ದರು. 4 ಆರೋಪಿಗಳನ್ನು ಬಂಧಿಸಲಾಗಿದೆ. ಇವರಿಂದ ಏಳು ಚಿನ್ನದ ಬಿಸ್ಕತ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತರ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.

Similar News