ಬಿಜೆಪಿಯ ಒಂದು ತಿಂಗಳ ಅವಧಿಯ 'ಮಹಾ ಜನಸಂಪರ್ಕ' ಅಭಿಯಾನಕ್ಕೆ ಇಂದು ಪ್ರಧಾನಿ ಚಾಲನೆ

Update: 2023-05-31 05:34 GMT

ಹೊಸದಿಲ್ಲಿ: ಎಲ್ಲಾ 543 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ತಿಂಗಳ ಅವಧಿಯ ಪ್ಯಾನ್-ಇಂಡಿಯಾ ಅಭಿಯಾನ 'ಮಹಾ ಜನಸಂಪರ್ಕ್'ಗೆ ರಾಜಸ್ಥಾನದ ಅಜ್ಮೀರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಚಾಲನೆ ನೀಡಲಿದ್ದಾರೆ.

ರಾಜಸ್ಥಾನದ ಅಜ್ಮೀರ್‌ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ "ಮಹಾ ಜನಸಂಪರ್ಕ್" ಅನ್ನು ಅರಂಭಿಸಲಿದ್ದಾರೆ. ಮೇ 31 ರಿಂದ (ಇಂದು) ಜೂನ್ 30 ರವರೆಗೆ ನಡೆಯಲಿರುವ ಈ ಮಹಾಜನ ಸಂಪರ್ಕದ ಅಡಿಯಲ್ಲಿ  ಕೇಂದ್ರದಲ್ಲಿ 9 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ದೇಶಾದ್ಯಂತ ವ್ಯಾಪಕ ಸಾರ್ವಜನಿಕ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ.

51 ಕ್ಕೂ ಹೆಚ್ಚು ಬೃಹತ್ ರ್ಯಾಲಿಗಳು, 500 ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಾರ್ವಜನಿಕ ಸಭೆಗಳು ಹಾಗೂ  500 ಕ್ಕೂ ಹೆಚ್ಚು ಲೋಕಸಭೆ ಹಾಗೂ  4000 ವಿಧಾನಸಭಾ ಕ್ಷೇತ್ರಗಳಲ್ಲಿ 600 ಕ್ಕೂ ಹೆಚ್ಚು ಪತ್ರಿಕಾಗೋಷ್ಠಿಗಳನ್ನು ನಡೆಸಲಾಗುವುದು ಹಾಗೂ  5 ಲಕ್ಷಕ್ಕೂ ಹೆಚ್ಚು ಪ್ರತಿಷ್ಠಿತ ಕುಟುಂಬಗಳನ್ನು ಸಂಪರ್ಕಿಸಲಾಗುವುದು.

ಬಿಜೆಪಿಯ ಇತಿಹಾಸದಲ್ಲಿಯೇ ಅತಿ ದೊಡ್ಡ ಕಾರ್ಯಕ್ರಮವಾಗಿರುವ ಮಹಾಜನ ಸಂಪರ್ಕದ ಕುರಿತು  ವಿವರಗಳನ್ನು ಹಂಚಿಕೊಂಡ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕಾರ್ಯಕ್ರಮದ ಸಂಯೋಜಕ ತರುಣ್ ಚುಗ್ “ಒಟ್ಟು 288 ಬಿಜೆಪಿಯ ಅಗ್ರ ನಾಯಕರು ಹಾಗೂ  16 ಲಕ್ಷ ಪಕ್ಷದ ಕಾರ್ಯಕರ್ತರು ಎಲ್ಲಾ ಲೋಕಸಭಾ ಸ್ಥಾನಗಳನ್ನು ಒಳಗೊಂಡಿರುವ  ಹತ್ತು ಲಕ್ಷ ಬೂತ್‌ ಹಾಗೂ 144 ಕ್ಲಸ್ಟರ್‌ಗಳಲ್ಲಿ ಮತದಾರರೊಂದಿಗೆ ಸಂವಾದ ನಡೆಸಲಿದ್ದಾರೆ  ಕೇಂದ್ರದಲ್ಲಿ ಪಕ್ಷದ ಒಂಬತ್ತು ವರ್ಷಗಳ ಆಡಳಿತದ ಸಾಧನೆಗಳ ಸಂದೇಶ ನೀಡಲಿದ್ದಾರೆ'' ಎಂದರು.

Similar News