ಅಯೋಧ್ಯೆಯಲ್ಲಿ ರ‍್ಯಾಲಿ ನಡೆಸಲಿರುವ ಬ್ರಿಜ್‌ ಭೂಷಣ್‌ ಬೆಂಬಲಕ್ಕೆ ನಿಂತ ಉತ್ತರ ಪ್ರದೇಶದ ಬಿಜೆಪಿ ನಾಯಕರು

Update: 2023-05-31 08:38 GMT

ಹೊಸದಿಲ್ಲಿ: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಹಾಗೂ ಭಾರತದ ಕುಸ್ತಿ ಫೆಡರೇಶನ್‌ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೇಶದ ಖ್ಯಾತನಾಮ ಕುಸ್ತಿಪಟುಗಳು ಹಲವು ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿರುವ ನಡುವೆಯೇ ಆರೋಪಿ ಸಿಂಗ್‌ ಉತ್ತರ ಪ್ರದೇಶದಲ್ಲಿ ನಡೆಸಲಿರುವ ರ್ಯಾಲಿಗೆ ವ್ಯಾಪಕ ಬೆಂಬಲ ದೊರೆಯುವಂತಾಗಲು ಉತ್ತರ ಪ್ರದೇಶದ ಬಿಜೆಪಿ ನಾಯುಕರು ಶ್ರಮಿಸುತ್ತಿದ್ದಾರೆ ಎಂದು thewire.in ವರದಿ ಮಾಡಿದೆ.

ಸಿಂಗ್‌ ಪ್ರಭಾವ ಸಾಕಷ್ಟಿರುವ ಉತ್ತರ ಪ್ರದೇಶದ ದೇವಿಪಟನ್‌ ಪ್ರಾಂತ್ಯದ ಹಲವು  ಬಿಜೆಪಿ ಶಾಸಕರು ಆತನಿಗೆ ಬೆಂಬಲವಾಗಿ ನಿಂತಿದ್ದು ಅಯೋಧ್ಯೆ ರ್ಯಾಲಿಗೆ ಜನರನ್ನು ಸೇರಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ.

ಜೂನ್‌ 5ರಂದು ತಾನು ಅಯೋಧ್ಯೆಯಲ್ಲಿ ಜನ ಚೇತನ ಮಹಾ ರ್ಯಾಲಿ ನಡೆಸುವುದಾಗಿ ಸಿಂಗ್‌ ಈಗಾಗಲೇ ಷೋಷಿಸಿಕೊಂಡಿದ್ದಾರೆ. ಇದು ತನ್ನ ವಿರುದ್ಧ ಪ್ರತಿಭಟಿಸುತ್ತಿರುವ ಮಹಿಳಾ ಕುಸ್ತಿಪಟುಗಳಿಗೆದುರಾಗಿ ಹಿಂದು ಧಾರ್ಮಿಕ ನಾಯಕರ ಬೆಂಬಲ ಪಡೆಯುವ ಯತ್ನ ತಿಳಿಯಲಾಗಿದೆ ಎಂದು thewire.in ವರದಿ ಮಾಡಿದೆ.

ಅಯ್ಯೋಧ್ಯೆಯ ಹಲವು ಪ್ರಮುಖ ಸಂತರು ಕೂಡ ಸಿಂಗ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆಂಬ ಮಾಹಿತಿಯಿದೆ.

Similar News