ಗಂಗಾನದಿಯಲ್ಲಿ ಪದಕ ಎಸೆದ ತಕ್ಷಣ ನನಗೆ ಗಲ್ಲು ಶಿಕ್ಷೆಯಾಗಲ್ಲ: ಬ್ರಿಜ್‌ ಭೂಷಣ್‌ ಸಿಂಗ್‌

ಕುಸ್ತಿಪಟುಗಳ ಎಚ್ಚರಿಕೆಗೆ ಆರೋಪಿ ಬಿಜೆಪಿ ಸಂಸದ ಪ್ರತಿಕ್ರಿಯೆ

Update: 2023-05-31 15:42 GMT

ಹೊಸದಿಲ್ಲಿ: ತಮ್ಮ ಪದಕಗಳನ್ನು ಗಂಗಾನದಿಯಲ್ಲಿ ಎಸೆಯುವ ಮಹಿಳಾ ಕುಸ್ತಿಪಟುಗಳ ಎಚ್ಚರಿಕೆಗೆ ಭಾರತೀಯ ಕುಸ್ತಿ ಫೆಡರೇಶನ್ ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಬಾರಾಬಂಕಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, "ನನ್ನ ವಿರುದ್ಧ ಒಂದೇ ಒಂದು ಆರೋಪ ಸಾಬೀತಾದರೆ ನೇಣು ಹಾಕಿಕೊಳ್ಳುತ್ತೇನೆ ಎಂದು ಹೇಳಿದ್ದೆ. ಇಂದಿಗೂ ನಾನು ಅದೇ ಮಾತಿನಲ್ಲಿ ನಿಲ್ಲುತ್ತೇನೆ" ಎಂದು ಹೇಳಿದ್ದಾರೆ.

ನನಗೆ ನೇಣು ಹಾಕಬೇಕೆಂದು ಹೇಳಿ ನಾಲ್ಕು ತಿಂಗಳಾಗಿದೆ. ಆದರೆ ಸರ್ಕಾರ ನನ್ನನ್ನು ಗಲ್ಲಿಗೇರಿಸುತ್ತಿಲ್ಲ, ಆದ್ದರಿಂದ ಅವರು (ಕುಸ್ತಿಪಟುಗಳು) ತಮ್ಮ ಪದಕವನ್ನು ಗಂಗಾನದಿಯಲ್ಲಿ ಎಸೆಯಲು ಹೊರಟಿದ್ದಾರೆ. ಗಂಗಾನದಿಯಲ್ಲಿ ಪದಕ ಎಸೆದ ತಕ್ಷಣ ನನ್ನನ್ನು ಗಲ್ಲಿಗೇರಿಸುವುದಿಲ್ಲ. ನಿಮ್ಮ ಬಳಿ ಪುರಾವೆ ಇದ್ದರೆ ಅದನ್ನು ನ್ಯಾಯಾಲಯಕ್ಕೆ ನೀಡಿ, ನ್ಯಾಯಾಲಯ ನನ್ನನ್ನು ಗಲ್ಲಿಗೇರಿಸಲು ಆದೇಶಿಸಿದರೆ ನಾನು ಅದನ್ನು ಒಪ್ಪಿಕೊಳ್ಳುತ್ತೇನೆ ಎಂದು ಬ್ರಿಜ್‌ ಭೂಷಣ್‌ ಹೇಳಿದ್ದಾರೆ.

Similar News