ಮೋದಿ ಸರಕಾರದಿಂದ ‘ಸ್ನೇಹಿತರಿಗೆ’ ರಾಷ್ಟ್ರೀಯ ಆಸ್ತಿಗಳ ಮಾರಾಟ ಅತಿ ದೊಡ್ಡ ದೇಶವಿರೋಧಿ ಕೃತ್ಯ: ಮಲ್ಲಿಕಾರ್ಜುನ ಖರ್ಗೆ

Update: 2023-05-31 16:28 GMT

ಹೊಸದಿಲ್ಲಿ: ಕಳೆದ ವಾರ ಅಧಿಕಾರದಲ್ಲಿ ಒಂಬತ್ತು ವರ್ಷಗಳನ್ನು ಪೂರೈಸಿರುವ ಪ್ರಧಾನಿ ಮೋದಿ ಸರಕಾರದ ವಿರುದ್ಧ ಬುಧವಾರ ಟ್ವಿಟರ್ ನಲ್ಲಿ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ಅದು ತನ್ನ ಬಂಡವಾಳಶಾಹಿ ಮಿತ್ರರಿಗೆ ರಾಷ್ಟ್ರೀಯ ಆಸ್ತಿಗಳು ಮತ್ತು ಸಾರ್ವಜನಿಕ ಕ್ಷೇತ್ರದ ಉದ್ಯಮ (PSU)ಗಳ ‘ಮಿಂಚಿನ ಮಾರಾಟ ’ವನ್ನು ನಡೆಸುತ್ತಿದೆ,ಇದು ಏಕೈಕ ಅತಿದೊಡ್ಡ ದೇಶವಿರೋಧಿ ಕೃತ್ಯವಾಗಿದೆ ಎಂದು ಆರೋಪಿಸಿದ್ದಾರೆ.

‌ಬಿಜೆಪಿ ನೇತೃತ್ವದ ಸರಕಾರದ ಒಂಭತ್ತು ವರ್ಷಗಳ ಆಡಳಿತವು ಅದಕ್ಷತೆ ಮತ್ತು ವೈಫಲ್ಯಗಳಿದ ಕೂಡಿತ್ತು ಎಂದು ಪ್ರತಿಪಾದಿಸಿರುವ ಕಾಂಗ್ರೆಸ್ ಆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪ್ರಚಾರ ಅಭಿಯಾನವನ್ನು ನಡೆಸುತ್ತಿದೆ.

ರಾಷ್ಟ್ರೀಯ ಆಸ್ತಿಗಳನ್ನು ತನ್ನ ಬಂಡವಾಳಶಾಹಿ ಮಿತ್ರರಿಗೆ ಮಾರಾಟ ಮಾಡುವ ಮೂಲಕ ಸರಕಾರದ ವಿನಾಶಕಾರಿ ಲೂಟಿಯು ಭಾರತದ ಬಡವರು, ಎಸ್ಸಿ-ಎಸ್ಟಿಗಳು ಮತ್ತು ಒಬಿಸಿಗಳ ಉದ್ಯೋಗಾವಕಾಶಗಳನ್ನು ಕಿತ್ತುಕೊಳ್ಳುತ್ತಿದೆ ಎಂದೂ ಖರ್ಗೆ ಆರೋಪಿಸಿದ್ದಾರೆ.

Similar News