ಕಾರ್ಕಳ: ಮನೆಗೆ ನುಗ್ಗಿ ನಗ ನಗದು ಕಳವು

Update: 2023-06-01 15:47 GMT

ಕಾರ್ಕಳ, ಜೂ.1: ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗ ನಗದು ಕಳವು ಮಾಡಿರುವ ಘಟನೆ ನಂದಳಿಕೆ ಗ್ರಾಮದ ಮೂಡು ಮನೆ ಎಂಬಲ್ಲಿ ಮೇ 26ರ ಮಧ್ಯಾಹ್ನದಿಂದ ಮೇ 30ರ ಸಂಜೆಯ ಮಧ್ಯಾವಧಿಯಲ್ಲಿ ನಡೆದಿದೆ.

ಸುಧಾಕರ ರಾವ್ ಎಂಬವರ ಮನೆಗೆ ನುಗ್ಗಿದ ಕಳ್ಳರು, ಕಪಾಟಿನಲ್ಲಿಟ್ಟಿದ್ದ 2 ಕರಿಮಣಿ ಸರ, ನಕ್ಲೇಸ್, ಮುತ್ತಿನ ಸರ, 3 ಕಿವಿ ಓಲೆ, 2 ಉಂಗುರ, ಚೈನು, ಮಕ್ಕಳ ಚೈನು, ಬಳೆ, ಆಧಾರ್ ಕಾರ್ಡ್, ಪಾನ್‌ಕಾರ್ಡ್ ಹಾಗೂ ಸುಮಾರು 3000 ನಗದು ರೂ. ನಗದು ಕಳವು ಮಾಡಿಕೊಂಡು ಹೋಗಿದ್ದಾರೆ. ಇವುಗಳ ಒಟ್ಟು ಮೊತ್ತ 5ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News